2016ರಲ್ಲಿ ಇಡೀ ದೇಶದಲ್ಲಿ ಸಂಚಲನ ಮೂಡಿಸಿದ್ದ ರೋಹಿತ್ ವೇಮುಲನ ಆತ್ಮಹತ್ಯೆ ಹಾಗೂ ಜೆ.ಎನ್.ಯು ವಿದ್ಯಾರ್ಥಿಗಳ ಮೇಲೆ ನಡೆದ ದಮನಗಳ ಹಿನ್ನಲೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಈ ಎರಡೂ ಘಟನೆಗಳನ್ನು ಖಂಡಿಸಿ ಪ್ರತಿರೋಧ ವ್ಯಕ್ತವಾಗಿದೆ. ಕನ್ನಡವು ಒಳಗೊಂಡಂತೆ ಹಲವಾರು ಪತ್ರಿಕೆ ನಿಯತಕಾಲಿಕೆಗಳಲ್ಲಿ ಲೇಖನಗಳನ್ನು ಬರೆದಿದ್ದಾರೆ. ಈ ಎಲ್ಲಾ ಲೇಖನಗಳ ಸಂಗ್ರಹವೇ ದೇಶ ಅಂದರೆ… ಮನುಷ್ಯರು. ವಿದ್ಯಾರ್ಥಿ ದಿಸೆಯಿಂದಲೂ ಚಳವಳಿಗಳಲ್ಲಿ ತೊಡಗಿಸಿಕೊಂಡಿದ್ದ ಹರ್ಷಕುಮಾರ್ ಕುಗ್ವೆ ಅವರು ರೋಹಿತ್ ವೇಮುಲಾ, ಜೆ.ಎನ್.ಯು ಘಟನೆ ಬಗ್ಗೆ, ಇಡೀ ದೇಶಾದ್ಯಂತ ವ್ಯಕ್ತವಾದ ಪ್ರತಿರೋಧ, ಈ ಘಟನೆಗಳನ್ನು ನಾವು ಹೇಗೆ ನೋಡಬೇಕು ಎಂಬುದರ ಬಗ್ಗೆ ಲೇಖನಗಳನ್ನು ಓದುಗರಿಗೆ ನೀಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರದವರಾದ ಹರ್ಷಕುಮಾರ ಅವರು ಪತ್ರಕರ್ತ ಹಾಗೂ ಪರಿಸರ ಕಾರ್ಯಕರ್ತ. ಕುವೆಂಪು ವಿಶ್ವವಿದ್ಯಾಲಯದಿಂದ ಬಿ.ಎ. ಪದವೀಧರರಾಗಿರುವ ಹರ್ಷ ಅವರು ನಂತರ ಕಾನೂನು ವ್ಯಾಸಂಗ ನಡೆಸಿದರು. ದ ಸಂಡೇ ಇಂಡಿಯನ್ ಪತ್ರಿಕೆಯಲ್ಲಿ ಕೆಲ ಕಾಲ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ ಹರ್ಷ ಅವರು ಸದ್ಯ ಸಂಶೋಧನೆಯಲ್ಲಿ ನಿರತರಾಗಿದ್ದಾರೆ. ಹಿರಿಯ ಪತ್ರಕರ್ತ ರವೀಶ್ ಕುಮಾರ್ ಅವರ ಕೃತಿಯನ್ನು ’ಮಾತಿಗೆ ಏನು ಕಡಿಮೆ’ ಎಂದು ಕನ್ನಡೀಕರಿಸಿದ್ದಾರೆ. ಮಾಂಗ್ ಗಾರುಡಿ ಸಮುದಾಯದ ಬಗ್ಗೆ ಸಂಶೋಧನಾತ್ಮಕ ಸಮಾಜ ಶಾಸ್ತ್ರೀಯ ಗ್ರಂಥ ಪ್ರಕಟಿಸಿದ್ದಾರೆ. ...
READ MORE