ಹಿರಿಯ ಲೇಖಕ ಎಸ್.ಎನ್. ಬಾಲಗಂಗಾಧರ ಅವರು ಇಂಗ್ಲಿಷಿನಲ್ಲಿ ಬರೆದ ವೈಚಾರಿಕ ಲೇಖನಗಳ ಕೃತಿಯನ್ನು ಲೇಖಕ ಡಾ. ರಾಜಾರಾಮ ಹೆಗಡೆ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ-ಬುದ್ಧಜೀವಿಗಳ ಮೂಢನಂಬಿಕೆಗಳು. ವಸಾಹತುಪ್ರಜ್ಞೆಯ ವಿಶ್ವರೂಪದ ಭಾಗ-2ರ ಕೃತಿ ಇದು. ಬ್ರಿಟಿಷರು ಬುದ್ಧಿಜೀವಿಗಳು ಎಂಬ ಭ್ರಮೆಯಲ್ಲಿರುವ ಬಹುತೇಕ ಭಾರತೀಯರಿಗೆ ತಮ್ಮ ಮೂಢನಂಬಿಕೆಗಳ ಅರಿವೂ ಇಲ್ಲ. ಬ್ರಿಟಿಷರ ನಂಬಿಕೆಗಳು ಸಹ ಭ್ರಮಾಧೀನ-ಮೌಢ್ಯ ಎಂದೂ ತಿಳಿದಿಲ್ಲ. ವಾಸ್ತವವಾಗಿ ಇಂತಹ ಸ್ಥಿತಿಯಲ್ಲಿರುವ ನಮಗೆ ಈ ಕೃತಿಯು ನೈಜವಾಗಿ ಯಾರು ಮೂಢನಂಬಿಕೆಗಳ ವಾರಸುದಾರರು, ಯಾರು ಪ್ರಸಾರಕ-ಪ್ರಚಾರಕರು ಎಂಬ ವಂಚನೆಯನ್ನು ಬಯಲು ಮಾಡುತ್ತದೆ. ಬ್ರಿಟಿಷರ ಪ್ರಗತಿಪರರು ಎಂದೇ ನಂಬಿದ ಕೆಲವು ಬುದ್ಧಿಜೀವಿಗಳು, ಪಾಶ್ಚಾತ್ಯ ಸಂಸ್ಕೃತಿಯನ್ನುಉತ್ತಮ ಎಂದೂ, ಭಾರತೀಯ ಆಚರಣೆಗಳು ಮೌಢ್ಯ ಎಂಬಂತೆ ವ್ಯಾಪಕ ಪ್ರಚಾರದ ಸರಣಿಗಳನ್ನೇ ಹರಡುತ್ತಿದ್ದಾರೆ. ಇಂತಹ ವಿದ್ಯಮಾನಗಳು ನಿಲ್ಲಬೇಕು ಎಂಬುದು ಕೃತಿಯ ಆಶಯ. ‘ನಮ್ಮದಲ್ಲದ ಜಗತ್ತು, ಅಗೋಚರ ವ್ಯವಸ್ಥೆಯ ಆವಾಂತರಗಳು ಹಾಗೂ ನಾರ್ಮೇಟಿವ್ ಚೌಕಟ್ಟಿಗೆ ನಿಲುಕದ ಜಗತ್ತು ಹೀಗೆ ಮೂರು ವಿಭಾಗಗಳಲ್ಲಿ ವಿಷಯದ ಮಂಡನೆ ಇದೆ. ಬುದ್ಧಿಜೀವಿಗಳ ಮೂಢನಂಬಿಕೆಯನ್ನು ಹೇಳುವಾಗ ಮತ್ತು ಭಾರತೀಯ ಸಂಸ್ಕೃತಿಯು ಮೂಢನಂಬಿಕೆಗಳನ್ನು ಒಳಗೊಂಡಿದೆ ಎಂದು ಬ್ರಿಟಿಷರು ಹೇಳುವಾಗಿನ ಎಲ್ಲ ಸಂದರ್ಭಗಳ್ಲೂ ಸಂಶೋಧನಾತ್ಮಕ ಆಧಾರಗಳನ್ನು ನೀಡಲಾಗಿದೆ. ಸತ್ಯವು ಪುನರ್ ಪರಿಶೀಲನೆಗೆ ಒಳಗಾಗಬೇಕು. ಎಂಬುದು ಕೃತಿಯ ಆಶಯವಾಗಿದೆ.
©2024 Book Brahma Private Limited.