ಜಾಗತೀಕರಣ ಮತ್ತು ದಲಿತರು

Author : ನಾ. ದಿವಾಕರ

Pages 92

₹ 60.00




Year of Publication: 2013
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ಮಹಾರಾಷ್ಟ್ರದ ಹಿರಿಯ ಚಿಂತಕ ಆನಂದ್‌ ತೇಲ್ತುಂಬ್ಡೆ ಬರೆದ ಪ್ರಸ್ತುತ ಕೃತಿ ಜಾಗತೀಕರಣದ ಸಂದರ್ಭದಲ್ಲಿ ದಲಿತರ ಸ್ಥಿತಿಗತಿಗಳನ್ನು ಮನಮುಟ್ಟುವಂತೆ ವಿವರಿಸುತ್ತದೆ. ಜಾಗತೀಕರಣ ದಲಿತರಿಗೆ ಒಳಿತನ್ನು ತರಬಲ್ಲದು ಎಂಬ ಮಾತು ಅದು ಅವತರಿಸಿದ ಘಟ್ಟದಲ್ಲಿತ್ತು. ಆದರೆ ಅದು ಮದ್ದಗಾಗುವ ಬದಲು ಮಾರಕವಾಯಿತು. ಜಾಗತೀಕರಣ ಶೋಷಿತರನ್ನು ಮಾಯಾವಿಯಾಗಿ ಕಾಡಿದ ಸಂಗತಿಯನ್ನು ವಿವರವಾಗಿ ಕೃತಿಯಲ್ಲಿ ತೆರೆದಿಡಲಾಗಿದೆ. 

ಕೃತಿಯನ್ನು ಕನ್ನಡಕ್ಕೆ ತಂದಿರುವ ನಾ. ದಿವಾಕರ್‌, ’ನವ ಉದಾರವಾದ ನೀತಿಯೂ ಸಹ ತನ್ನ ಆಕ್ರಮಣಕಾರಿ ಪ್ರವೃತ್ತಿಯನ್ನು ಬದಿಗಿಟ್ಟು, ನೊಂದ ಜನಸಮುದಾಯಗಳ ಮನಗೆಲ್ಲಲು ವಿಭಿನ್ನ ತಂತ್ರಗಳನ್ನು ಅನುಸರಿಸುತ್ತಿದೆ. ನವ ಉದಾರವಾದದ ಕರಾಳ ಬಾಹುಗಳನ್ನು ಪ್ರತಿರೋಧಿಸುವ ಜನಪರ ಚಳವಳಿಗಳನ್ನು ದೇಶದ ಭದ್ರತೆಗೆ ಮಾರಕ ಎಂದು ಬಿಂಬಿಸುವುದು ಈ ತಂತ್ರಗಳಲ್ಲಿ ಒಂದಾಗಿದೆ. ವಿಪರ್ಯಾಸವೆಂದರೆ ದೇಶದ ದಲಿತ ಸಮುದಾಯಗಳು, ಸಾಮುದಾಯಿಕ ಪ್ರಜ್ಞೆಯನ್ನೇ ಕಳೆದುಕೊಳ್ಳುತ್ತಿರುವ ಸಂಘಟನೆಗಳು ಅಳ್ಳಿಕರ ಈ ತಂತ್ರಕ್ಕೆ ಸುಲಭವಾಗಿ ತುತ್ತಾಗುತ್ತಿವೆ ಎಂದು ಮುನ್ನುಡಿಯಲ್ಲಿ ಪ್ರಸ್ತಾಪಿಸಿದ್ದಾರೆ. 

ಜಾಗತೀಕರಣದ ಚಾರಿತ್ರಿಕ ದೃಷ್ಟಿಕೋನ, ಅದು ಭಾರತ ಪ್ರವೇಶಿಸಿದ ಸಂದರ್ಭ, ದಲಿತರ ಸ್ಥಿತ್ಯಂತರ, ದಲಿತರ ವಾಸ್ತವ ಸ್ಥಿತಿ, ಸುಧಾರಣೆ ಬಡಜನರನ್ನು ಪ್ರಭಾವಿಸಿರುವ ರೀತಿ ಇತ್ಯಾದಿ ಮಹತ್ವದ ವಿಚಾರಗಳು ಕೃತಿಯಲ್ಲಿ ಚರ್ಚಿತವಾಗಿವೆ. 

About the Author

ನಾ. ದಿವಾಕರ

ಚಿಂತಕ, ಲೇಖಕ ನಾ. ದಿವಾಕರ ಅವರು ಹುಟ್ಟಿದ ಊರು ಕೋಲಾರ ಜಿಲ್ಲೆಯ ಚಿಂತಾಮಣಿ. 1961ರಲ್ಲಿ ಜನಿಸಿದ ಅವರು ಬೆಳೆದದ್ದು ಅದೇ ಜಿಲ್ಲೆಯ ಬಂಗಾರಪೇಟೆಯಲ್ಲಿ. ಪೂರ್ಣ ವಿದ್ಯಾಭ್ಯಾಸ ಬಂಗಾರಪೇಟೆಯಲ್ಲಿ ಮುಗಿಸಿದ ಅವರು ಬಿಕಾಂ ವ್ಯಾಸಂಗವನ್ನು ಕೋಲಾರದ ಸರ್ಕಾರಿ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ವಿದ್ಯಾರ್ಥಿ ದೆಸೆಯಲ್ಲಿಯೇ ಗಾಯನ, ನಾಟಕಗಳಲ್ಲಿ ಆಸಕ್ತಿಯೊಂದಿದ್ದ ಅವರು, ಹಲವು ಗೀತ ಗಾಯನ ಸ್ಪರ್ಧೆ, ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಿಹಿಸಿದ್ದಾರೆ. ತುರ್ತುಪರಿಸ್ಥಿತಿಯ ಸಂದರ್ಭದ ನಂತರ ರಾಜಕೀಯದತ್ತ ಒಲವು ತೊರಿದ ದಿವಾಕರ್ ಕ್ರಮೇಣ ದಲಿತ ಚಳುವಳಿ ಮತ್ತು ಮಾರ್ಕ್ಸ್ ವಾದಿ ಅಧ್ಯಯನದತ್ತ ಒಲವು ಬೆಳೆಸಿಕೊಂಡರು. 1982ರಲ್ಲಿ ಪದವಿ ಮುಗಿಸಿ 1984ರಲ್ಲಿ ಕೆನರಾಬ್ಯಾಂಕ್ ...

READ MORE

Related Books