ದಾದಾ ಅವರು ಪ್ರತಿಭಾನ್ವಿತ ಲೇಖಕ, ದಾರ್ಶನಿಕ ಹಾಗೂ ಭಾರತದ ಮಹಾನ್ ಸಾಧು ಮತ್ತು ಋಷಿಗಳ ಪರಂಪರೆಯನ್ನು ಮುಂದುವರಿಸುವ ಸಲುವಾಗಿ ಶ್ರಮಿಸಿದರು. ಜೆ.ಪಿ. ವಾಸ್ವಾನಿಯವರು ಜಗತ್ತಿನಾದ್ಯಂತ ಸಂಚರಿಸಿ ಜ್ಞಾನ ಪಡೆದವರು. ಅವರು ನೀಡಿದ ಹಲವಾರು ಪ್ರವಚನಗಳನ್ನು ಸಂಗ್ರಹಿಸಲಾಗಿರುವ ಪ್ರಶ್ನೋತ್ತರ ರೂಪದ ಸಂಕಲನ ದಾದಾ ಉತ್ತರಿಸುತ್ತಾರೆ ಭಾಗ-1. ಕನ್ನಡಕ್ಕೆ ಲೇಖಕ ಸಿದ್ಧಲಿಂಗಯ್ಯ ಜಿ. ಎಸ್. ಅನುವಾದಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ 17ನೇ (1988-1992) ಅಧ್ಯಕ್ಷರಾಗಿದ್ದ ಜಿ.ಎಸ್.ಸಿದ್ಧಲಿಂಗಯ್ಯ, ವಚನ ಸಾಹಿತ್ಯ ವಿದ್ವಾಂಸರು, ಶಿಕ್ಷಣ ತಜ್ಞರು, ಕವಿಗಳು ಆಗಿದ್ದರು. ತುಮಕೂರು ಜಿಲ್ಲೆಯ ಬೆಳ್ಳಾವೆಯಲ್ಲಿ 1931 ರ ಫೆ. 20 ರಂದು ಜನನ. ಮೈಸೂರು ವಿ.ವಿ. ಮಹಾರಾಜ ಕಾಲೇಜಿನಿಂದ ಬಿ.ಎ. ಮೈಸೂರು ವಿ.ವಿ.ಯಿಂದ 1961ರಲ್ಲಿ ಎಂ.ಎ. ಪದವೀಧರರು. ಸರ್ಕಾರಿ ಕಾಲೇಜಿನ ಅಧ್ಯಾಪಕ-ಪ್ರಾಧ್ಯಾಪಕ-ಪ್ರಾಂಶುಪಾಲರಾಗಿ ನಂತರ 1988 ರಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರಾಗಿ ನಿವೃತ್ತರಾದರು. ವಿಮರ್ಶೆ : ಮಹಾನುಭಾವ ಬುದ್ಧ, ಕವಿ ಲಕ್ಷ್ಮೀಶ, ಚಾಮರಸ, ಹೊಸಗನ್ನಡ ಕಾವ್ಯ, ಕವನ ಸಂಕಲನ : ಉತ್ತರ, ಚಿತ್ರ-ವಿಚಿತ್ರ, ಐವತ್ತರ ನೆರಳು, ಹಾಗೂ ಸಂಪಾದನೆ ...
READ MORE