ತಳಸಮುದಾಯದವರ ಗುರುತಿನ ಕುರಿತು ಮಾತನಾಡುವ ಪ್ರಸ್ತುತ ಕೃತಿಯನ್ನು ಬರೆದವರು ಶ್ರೀನಿವಾಸ ಭಾಲೆರಾವ್. ಅದನ್ನು ಕನ್ನಡೀಕರಿಸಿರುವುದು ಸಿದ್ರಾಮ ಕಾರಣಿಕ. ದಲಿತ ಅಸ್ಮಿತೆ ನಿಜವಾಗಿಯೂ ಏನು ಎಂಬುದನ್ನು ಕೃತಿ ವಿಶಿಷ್ಟ ರೀತಿಯಲ್ಲಿ ಪ್ರಸ್ತಾಪಿಸುತ್ತದೆ. ಮನುಸ್ಮೃತಿಯ ಸಾಂಸ್ಕೃತಿಕ ರಾಜಕಾರಣ, ಶ್ರಮಿಕ ವರ್ಗ ಬೆಲೆ ಕಳೆದುಕೊಂಡಿರುವುದು, ಬಹುದೊಡ್ಡ ಪರಂಪರೆಯೊಂದು ಮೇಲ್ಜಾತಿಗಳ ಹೊಡೆತಕ್ಕೆ ಸಿಲುಕಿದ್ದನ್ನು ವಿಶಿಷ್ಟವಾಗಿ ಚಿತ್ರಿಸಲಾಗಿದೆ.
ಕೆಳಜಾತಿಯವರಿಗೆ ಒಂದು ಅಸ್ಮಿತೆಯನ್ನು ತಂದುಕೊಟ್ಟ ಅಂಬೇಡ್ಕರ್, ಅದರೊಂದಿಗೆ ಸಾಮಾಜಿಕ ಹೋರಾಟಗಾರರ ಶ್ರಮ, ಶೂದ್ರರು ದಲಿತರಿಗೂ ಇರುವ ವ್ಯತ್ಯಾಸಗಳನ್ನು ಕೃತಿ ಸೂಕ್ಷ್ಮವಾಗಿ ವಿಶ್ಲೇಷಿಸುತ್ತದೆ.
©2024 Book Brahma Private Limited.