’ಕೊನೆಯ ಜಿಗಿತ’ ಕೃತಿಯು ಹೆಗಡೆ ಆರ್. ಪಿ. ಅವರ ಅನುವಾದಿತ ಕಾದಂಬರಿ. ರೈತರ ಆತ್ಮಹತ್ಯೆಗಳ ಹಿನ್ನೆಲೆಯನ್ನು ಇಟ್ಟುಕೊಂಡು ರಚಿತವಾಗಿರುವ ಈ ಕಾದಂಬರಿಯ ಮೂಲ ಲೇಖಕ ಶಿವಮೂರ್ತಿ. ಈ ಕಾದಂಬರಿ ರೈತರ ಸಾವಿನ ಹೆಜ್ಜೆಯ ಹಿಂದಿರುವ ನೋವನ್ನು ಎಲ್ಲರ ಸೂಕ್ಷ್ಮಗಳಿಗೆ ತಾಗುವಂತೆ ಚಿತ್ರಿಸುತ್ತ, ವೈಯುಕ್ತಿಕ ಸೂಕ್ಷ್ಮವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ರೈತರ ವಿಚಾರಗಳನ್ನು, ಕಷ್ಟಗಳನ್ನು ಹಾಗೂ ಅವರು ಅನುಭವಿಸುವ ತೊಳಲಾಟವನ್ನು ಚಿತ್ರಿಸುವ ಲೇಖಕನ ಬರವಣಿಗೆಯು ಗ್ರಾಮ ಭಾರತದ ನೋವಿನಲ್ಲಿ ಅತ್ಯಂತ ಸಮರ್ಥವಾಗಿ ಮುಟ್ಟುತ್ತದೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಪದವಿ ಕಾಲೇಜಿನಲ್ಲಿ ಸುದೀರ್ಘ - ಅವಧಿಯವರೆಗೆ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಆರ್ ಪಿ ಹೆಗಡೆ ಅವರು ಸದ್ಯ ನಿವೃತ್ತಿ ಜೀವನ ನಡೆಸುತ್ತಿದ್ದಾರೆ. ಅನುವಾದ ಕ್ಷೇತ್ರದಲ್ಲಿ ಬಹಳಷ್ಟು ಕೆಲಸ ಮಾಡಿದ್ದಾರೆ. ಕನ್ನಡದಲ್ಲಿ ಎಂಟು, ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ 25ಕ್ಕೂ ಹೆಚ್ಚು ಕೃತಿಗಳು ಮತ್ತು ಕನ್ನಡದಿಂದ ಹಿಂದಿಗೆ ಅನುವಾದಿಸಿದ ನಾಲ್ಕು ಕೃತಿಗಳು ಪ್ರಕಟಗೊಂಡಿವೆ. ಇದಲ್ಲದೆ ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿರುವ ಅನೇಕ ಸಣ್ಣ ಕಥೆಗಳು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅನುವಾದ ವಿಭಾಗದಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪಡೆದಿರುವ ಹೆಗಡೆಯವರಿಗೆ ಶಿರಸಿಯ ಕವಿ ಕಾವ್ಯ ...
READ MORE