‘ನಾನೇಕೆ ದೇವರನ್ನು ನಂಬಲಿಲ್ಲ’ ಎಂಬ ಮೂಲ ಕೃತಿ ಕೆ. ವೀರಮಣಿ ಬರೆದಿದ್ದು, ಅದನ್ನು ಲೇಖಕ ಕೆ. ಮಾಯಿಗೌಡ ಅವರು ಕನ್ನಡೀಕರಿಸಿದ್ದಾರೆ. ದೇವರೇ ಈ ಜಗತ್ತಿನ ನಿರ್ಮಾತೃ. ಆತನೇ ಜಗದ ಎಲ್ಲ ವಿದ್ಯಮಾನಗಳಿಗೆ ಕಾರಣೀಕರ್ತ. ಎಲ್ಲ ವಿದ್ಯಮಾನಗಳ ಜನಕನಂತೆ ವಿನಾಶಕನೂ ಆಗಿದ್ದಾನೆ. ಹೀಘೆ ನಂಬುವವರ ಸಂಖ್ಯೆಯೇ ಹೆಚ್ಚಿರುವ ಈ ಜಗತ್ತಿನಲ್ಲಿ ‘ನಾನೇಕೆ ದೇವರನ್ನು ನಂಬಲಿಲ್ಲ’ ಎನ್ನುವ ಕೃತಿಕಾರರಂತೆ ವಿಚಾರ ಉಳ್ಳವರೂ ಇದ್ದಾರೆ. ತಮ್ಮ ವೈವಿಧ್ಯಮಯ ವಾದಗಳಿಗೆ ಸಮರ್ಥನೆಗಳನ್ನೂ ನೀಡುತ್ತಾರೆ. ಹಾಗೇಯೆ, ಮೂಲ ಲೇಖಕರು ದೇವರ ಕುರಿತು ತಮಗೆ ನಂಬಿಕೆ ಏಕೆ ಬರಲಿಲ್ಲ ಎಂಬುದರ ಬಗ್ಗೆ ಈ ಕೃತಿಯಲ್ಲಿ ಪ್ರತಿಪಾದಿಸಿದ್ದಾರೆ.
ಕೆ. ಮಾಯಿಗೌಡ ಅವರು ಮಂಡ್ಯ ಜಿಲ್ಲೆಯ ನವಿಲುಮಾರನಹಳ್ಳಿಯವರು. ನಿವೃತ್ತ ಮುಖ್ಯೋಪಾಧ್ಯಯರು ರಾಷ್ಟ್ರಕವಿ ಕುವೆಂಪು ಅವರೊಂದಿಗೆ ಒಡನಾಟ. ಸ್ವಾತಂತ್ಯ್ರಯೋಧ ಕನಕಪುರದ ಕರಿಯಪ್ಪನವರು, ಅಂಬೇಡ್ಕರ್, ಕೋವೂರ್, ಬಸವ, ಮಾರ್ಕ್ಸ್ , ಪೆರಿಯಾರ್ ಚಿಂತನೆಗಳಿಂದ ಪ್ರೇರಣೆ. ಸ್ಥಳೀಯ ಪತ್ರಿಕೆಯಲ್ಲೂ ಕೆಲಸ ಮಾಡಿದರು. ಮಾಜಿ ಸಚಿವ ಬಿ. ಬಸಲಿಂಗಪ್ಪ ಅವರ ಒಡನಾಟದಿಂದ (1978) ಪಾಂಡವಪುರ ವಿಧಾನಸಭಾ ಕ್ಷೇತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಸೋತರು. ನಂತರ, ದೇವರಾಜ ಅರಸು ಅವರೊಂದಿಗೆ ಇದ್ದ ಆತ್ಮೀಯ ಒಡನಾಟವು ಇತ್ತು. ಕೋವೂರು ಕಂಡ ವೈಜ್ಞಾನಿಕ ಸತ್ಯ-ಇವರ ಅನುವಾದಿತ ಕೃತಿ. ...
READ MORE