ಭಾರತೀಯ ತತ್ವಜ್ಞಾನಿ ಖ್ಯಾತಿಯ ಜಿಡ್ಡು ಕೃಷ್ಣಮೂರ್ತಿ ಅವರ ಕೃತಿ-ಸಾಮಾಜಿಕ ಹೊಣೆಗಾರಿಕೆ. ಲೇಖಕ ಮಹಾಬಲೇಶ್ವರ ರಾವ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಪ್ರತಿಯೊಬ್ಬನಿಗೂ ಸಾಮಾಜಿಕ ಹೊಣೆಗಾರಿಕೆ ಇದೆ. ಪ್ರತಿ ಜೀವಿಯ ಬೆಳವಣಿಗೆಗೆ ಸುತ್ತಲಿನ ಸಮಾಜವೂ ಹೊಣೆಯಾಗಿರುತ್ತದೆ. ಅದಕ್ಕಾಗಿ ಪ್ರತಿ ಜೀವಿಯೂ ಆ ಸಮಾಜಕ್ಕೆ ಋಣ ತೀರಿಸುವುದೇ ಸಾಮಾಜಿಕ ಹೊಣೆಗಾರಿಕೆ. ಈ ಹಿನ್ನೆಲೆಯಲ್ಲಿ, ಪ್ರತಿಯೊಬ್ನನೂ ಈ ಸಮಾಜದ ಆರೋಗ್ಯಕ್ಕಾಗಿ ಕೊಡುಗೆ ನೀಡಲೇಬೇಕು. ಸಾಮಾಜಿಕ ಹೊಣೆಗಾರಿಕೆಯಿಂದ ಯಾವ ಜೀವಿಯೂ ಹೊರತಲ್ಲ ಎಂಬ ಎಚ್ಚರಿಕೆ ಹಾಗೂ ಮಹತ್ವದ ವಿಷಯವನ್ನು ವಿಸ್ತಾರವಾಗಿ ವಿವರಿಸಿರುವ ಕೃತಿ ಇದು. ಸಾಮಾಜಿಕ ಹೊಣೆಗಾರಿಕೆ ಕುರಿತು ಜಿಡ್ಡು ಕೃಷ್ಣಮೂರ್ತಿ ಅವರ ಬೋಧನೆಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ.
©2024 Book Brahma Private Limited.