ಕಂಚ ಐಲಯ್ಯನವರ ’ತಿಗುರಿ ತಿರುಗಿಸು ನೇಗಿಲು ಉಳು ’ ಪುಸ್ತಕವನ್ನು ಕನ್ನಡಕ್ಕೆ ಬಿ. ಸುಜ್ಞಾನಮೂರ್ತಿಯವರು ತಂದಿದ್ದಾರೆ.
ಆದಿವಾಸಿಗಳು, ಪಶುಪಾಲಕರು, ಚಮ್ಮಾರರು, ಕುಂಬಾರರು, ರೈತರು, ನೇಕಾರರು, ಆಗಸರು, ಕ್ಷೌರಿಕರ ಜೀವನ ವೃತ್ತಿಯಲ್ಲಿರುವ ವಿಜ್ಞಾನವನ್ನು ಓದುರ ಕಣ್ಣ ಮುಂದೆ ಸವಿವರವಾಗಿ ಅನಾವರಣಗೊಳಿಸುತ್ತದೆ. ತಲೆಮಾರು ಗಳಿಂದ ಕೀಳಾಗಿ “ಕೆಳಜಾತಿಗಳಾಗಿ ತಾರತಮ್ಯವನ್ನು ಎದುರಿಸುತ್ತಿರುವ ಕೆಲವು ಸಮುದಾಯದವರು ವಾಸ್ತವವಾಗಿ ಈ ಭೂಮಿಯ ಮೇಲೆ ಮಾನವ ಜೀವನ ಪ್ರಮಾಣವನ್ನು ಉತ್ತಮಪಡಿಸುವುದಕ್ಕೆ, ಮನುಷ್ಯನ ಬದುಕನ್ನು ವೈಜ್ಞಾನಿಕವಾದ ದಾರಿಯಲ್ಲಿ ನಡೆಸುವುದಕ್ಕೆ ಎಂತಹ ಶ್ರೇಷ್ಠ ಕೃಷಿಯನ್ನು ಮಾಡಿದ್ದಾರೆಂಬುದು ಈ ಕೃತಿ ಪರಿಚಯಿಸುತ್ತದೆ.
ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದಲ್ಲಿ ಸಹಾಯಕ ನಿರ್ದೇಶಕರಾಗಿರುವ ಬಿ. ಸುಜ್ಞಾನಮೂರ್ತಿ ಅವರು ಅನುವಾದ ಕ್ಷೇತ್ರದಲ್ಲಿ ಮಹತ್ವದ ಕೆಲಸ ಮಾಡುತ್ತಿದ್ದಾರೆ. ಯಾರದೀ ಕಾಡು, ಅಸಮರ್ಥನ ಜೀವನಯಾತ್ರೆ, ಬೆಕ್ಕಿನ ಆತ್ಮಕತೆ, ನೇಣುಗಂಬದ ನೆರಳಿನಲ್ಲಿ, ನಮಗೆ ಗೋಡೆಗಳಲ್ಲ, ಜಾತಿವಿನಾಪ, ದಲಿತತತ್ವ, ಪುರುಷ ಅಹಂಕಾರಕ್ಕೆ ಸವಾಲ್, ದಲಿತ ಹೋರಾಟಗಾರ ಅರ್ಯ ಕಾಳಿ, ಚಾರ ಮಾರ್ಗವಿನಾಶ, ಪರಿಯಾರ್ ಜೀವನಚಳವಳಿ, ತಿಗುರಿ ತಿರುಗಿಸು ನೇಗಿಲು ಉಳು, ದಲಿತ ರಾಜಕೀಯ, ಆಕಾಶದೇವರು, ಮುಸತಿ ಅಪರಾಧ-ಶಿಕ್ಷೆ, ಸ್ವಾಭಿಮಾನದ ಮದುವೆಗಳು, ಆಸ್ಪಕೃತ, ತೆಲಂಗಾಣ ಹೋರಾಟ ಆದ ಪ್ರಮುಖ ಅನುವಾದಿತ ಕೃತಿಗಳು. ಯಾರದೀ ಕಾಡು ಕಾದಂಬರಿಗೆ ಮತ್ತು ತೆಲಂಗಾಣ ಹೋರಾಟ ಕೃತಿಗೆ ಕರ್ನಾಟಕ ...
READ MORE