ಮಹಾತ್ಮ ಗಾಂಧಿ ಅವರ ಬೋಧನೆ-ಸಲಹೆಗಳನ್ನು ಆಧರಿಸಿ ಓಶೋ ರಜನೀಶ್ ಅವರು ಸ್ಪಂದಿಸಿದ ವಿಚಾರಗಳನ್ನು ಲೇಖಕ ಟಿ.ಎನ್. ವಾಸುದೇವ ಮೂರ್ತಿ ಅವರು ಕನ್ನಡಕ್ಕೆ ಅನುವಾದಿಸಿದ್ದೇ ಈ ಕೃತಿ-ಮಹಾತ್ಮ; ಗಾಂಧೀ ವಾದದ ಗೊತ್ತು-ಗುರಿಗಳು. ಗಾಂಧಿ ಅವರ ಅಹಿಂಸೆ ಸೂತ್ರ ಕೆಲವರಿಗೆ ಸಹನೆ ಆಗದು. ಅದು ದುಷ್ಟರನ್ನು ಶಿಕ್ಷಿಸದು ಎಂಬ ಭಾವನೆ ಇರುತ್ತದೆ. ಆದರೆ, ದುಷ್ಟರನ್ನು, ವೈರಿಗಳನ್ನು ದಮನ ಮಾಡುವ ಬದಲು ಅವರನ್ನು ಸುಧಾರಿಸಿ ಮನುಷ್ಯನನ್ನಾಗಿಸುವುದು ಗಾಂಧೀ ವಾದದ ತಿರುಳು. ಪ್ರಾಮಾಣಿಕ ವ್ಯಕ್ತಿತ್ವ ಹೊಂದುವ ಮೂಲಕ ಪಶ್ಚಾತ್ತಾಪದೊಂದಿಗೆ ಸಹಬಾಳ್ವೆ ನಡೆಸುವಂತೆ ಪ್ರೇರೇಪಿಸುತ್ತದೆ. ಇಂತಹ ಚಿಂತನೆಗಳ ಜಿಜ್ಞಾಸೆಯನ್ನು ಓಶೋ ಅವರು ನಡೆಸಿದ್ದು, ಈ ಕೃತಿಯ ವಸ್ತು.
ಟಿ.ಎನ್.ವಾಸುದೇವ ಮೂರ್ತಿ ಅವರು ಕಿ.ರಂ.ನಾಗರಾಜ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ಅಲ್ಲಮ ಪ್ರಭುವಿನ ವಚನಗಳ ದಾರ್ಶನಿಕ ಮರುಚಿಂತನೆಯ ವಿಭಿನ್ನ ಸ್ವರೂಪಗಳು ಎಂಬ ಮಹಾಪ್ರಬಂಧಕ್ಕೆ ಹಂಪಿ ಕನ್ನದ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪ್ರಶಸ್ತಿ ಸಂದಿದೆ. ಬೆಂಗಳೂರು ವಿವಿಯಲ್ಲಿ ಕನ್ನಡ ಎಂ.ಎ (ತೌಲನಿಕ ಸಾಹಿತ್ಯ) ಪದವಿಯನ್ನು ಪಡೆದ ಮೇಲೆ ಬೆಂಗಳೂರಿನ ಹಲವು ಪ್ರಮುಖ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದರು. ನ್ಯಾಷನಲ್ ಕಾಲೇಜು, ಜೈನ್ ವಿಶ್ವವಿದ್ಯಾಲಯ ಕಾವ್ಯಮಂಡಲ ಮೊದಲಾದ ಕನ್ನಡ ಸ್ನಾತಕೋತ್ತರ ಕೇಂದ್ರಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಎಂ.ಎ. ಹಾಗೂ ಎಂ.ಫಿಲ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ. ಓಶೋ ನೇರ ಶಿಷ್ಯರಾದ ಸ್ವಾಮಿ ಆನಂದ್ ಪ್ರಭಾವದಿಂದ ದೀಕ್ಷೆ ...
READ MORE