ಎಲ್ಲರ ಬದುಕಿನಲ್ಲೂ ಬಾರದ ಲೋಕದ ಈ ಸಾವಿಗೆ ಕದ ತೆರೆಯಲೇಬೇಕು. ಆದರೆ ಸಾವು ಎನ್ನುವುದೇನು? ಸಾವಿನ ಅನಂತರ ಏನಾಗುತ್ತದೆ? ಸಾವು ಅಂತಿಮವಾದ ಕೊನೆಯೆ? ಇಂತಹ ಅನೇಕ ಉತ್ತರಿಸಲಾಗದ ಪ್ರಶ್ನೆಗೆ ಇಲ್ಲಿ ಉತ್ತರಿಸಿದ್ದಾರೆ ದಾದಾ ವಾಸನ್ವಿ. ಭೀತಿ ಮತ್ತು ಸಂದೇಹಗಳನ್ನು ದೂರ ಮಾಡುವ ಕುರಿತು ಚರ್ಚಿಸಿದ್ದು ಸಾವಿನ ಕತ್ತಲ ಮೇಲೆ ಬೆಳಕು ಚೆಲ್ಲುತ್ತದೆ. ಲೇಖಕ ಜಿ. ಎಸ್. ಸಿದ್ಧಲಿಂಗಯ್ಯ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ 17ನೇ (1988-1992) ಅಧ್ಯಕ್ಷರಾಗಿದ್ದ ಜಿ.ಎಸ್.ಸಿದ್ಧಲಿಂಗಯ್ಯ, ವಚನ ಸಾಹಿತ್ಯ ವಿದ್ವಾಂಸರು, ಶಿಕ್ಷಣ ತಜ್ಞರು, ಕವಿಗಳು ಆಗಿದ್ದರು. ತುಮಕೂರು ಜಿಲ್ಲೆಯ ಬೆಳ್ಳಾವೆಯಲ್ಲಿ 1931 ರ ಫೆ. 20 ರಂದು ಜನನ. ಮೈಸೂರು ವಿ.ವಿ. ಮಹಾರಾಜ ಕಾಲೇಜಿನಿಂದ ಬಿ.ಎ. ಮೈಸೂರು ವಿ.ವಿ.ಯಿಂದ 1961ರಲ್ಲಿ ಎಂ.ಎ. ಪದವೀಧರರು. ಸರ್ಕಾರಿ ಕಾಲೇಜಿನ ಅಧ್ಯಾಪಕ-ಪ್ರಾಧ್ಯಾಪಕ-ಪ್ರಾಂಶುಪಾಲರಾಗಿ ನಂತರ 1988 ರಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರಾಗಿ ನಿವೃತ್ತರಾದರು. ವಿಮರ್ಶೆ : ಮಹಾನುಭಾವ ಬುದ್ಧ, ಕವಿ ಲಕ್ಷ್ಮೀಶ, ಚಾಮರಸ, ಹೊಸಗನ್ನಡ ಕಾವ್ಯ, ಕವನ ಸಂಕಲನ : ಉತ್ತರ, ಚಿತ್ರ-ವಿಚಿತ್ರ, ಐವತ್ತರ ನೆರಳು, ಹಾಗೂ ಸಂಪಾದನೆ ...
READ MORE