ಒಂದು ನಿಟ್ಟಿನಿಂದ ನೋಡಿದರೆ ಆತ್ಮಕತೆಯಂತೆ, ಮತ್ತೊಂದು ನೆಲೆಯಿಂದ ಗ್ರಹಿಸಿದರೆ ಭೌತಶಾಸ್ತ್ರದ ಕಗ್ಗದಂತೆ, ಇವೆರಡೂ ಅಲ್ಲದ ಬೇರೊಂದು ಕೋನದಿಂದ ಕಂಡರೆ ತತ್ವಜ್ಞಾನದ ಜಿಜ್ಞಾಸೆಯಂತೆ ಕಾಣುವ ಕೃತಿ ಮಣಿ ಭೌಮಿಕ್ ಅವರ ’ಕೋಡ್ ನೇಮ್ ಗಾಡ್’. ಕೃತಿಯ ಕುರಿತು ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಹೀಗೆ ಹೇಳಿದ್ದಾರೆ: “ ಕೋಡ್ ನೇಮ್ ಗಾಡ್' ಎಂಬ ಶೀರ್ಷಿಕೆಯ ನಿಮ್ಮ ಕೃತಿಯನ್ನು ಓದಿದ್ದೇನೆ. ಜಗತ್ತಿನ ಶ್ರೇಷ್ಠ ಆಧ್ಯಾತ್ಮಿಕ ಚಿಂತನಾ ಪರಂಪರೆಗಳ ಏಕಮೂಲವು ವೈಜ್ಞಾನಿಕ ವಾಸ್ತವಗಳನ್ನು ಆಧರಿಸಿವೆ ಎಂಬ ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವಿದೆ’ ಎಂದಿದ್ದಾರೆ.
'ಈ ಪುಸ್ತಕವನ್ನು ಒಮ್ಮೆ ಕೈಗೆತ್ತಿಕೊಂಡ ನಂತರ ಅದನ್ನು ಕೆಳಗಿಡಲು ಮನಸ್ಸೇ ಬರಲಿಲ್ಲ. ಇದೊಂದು ವಿನಮ್ರವಾದ ಅನುಭವ ಮತ್ತು ಈ ಪುಸ್ತಕವು ನಿಮ್ಮ ಬದುಕನ್ನು ಬದಲಿಸಬಲ್ಲದು.” ಎಂದವರು ಕೇಂದ್ರದ ಮಾಜಿ ಸಚಿವ ಕಪಿಲ್ ಸಿಬಲ್.
ಕೃತಿಯನ್ನು ಕನ್ನಡಕ್ಕೆ ತಂದಿದ್ದಾರೆ ಪ್ರಸಿದ್ಧ ಬರಹಗಾರ ಡಾ. ಕೆ. ಪುಟ್ಟಸ್ವಾಮಿ.
©2024 Book Brahma Private Limited.