ಆಧುನಿಕ ಭಾರತದ ಸಾಮಾಜಿಕ ಮತ್ತು ರಾಜಕೀಯ ವಿಮರ್ಶಕ ಪ್ರೊ. ಅಶೀಶ್ ನಂದಿ. ಅವರ ಬರಹಗಳು ಮೊನಚಾದ ಚಿಂತನೆಗಳಿಂದ ಕೂಡಿರುತ್ತವೆ. ನಾವು ಯಾವುದನ್ನು ಸ್ವತಃಸಿದ್ಧ ಸತ್ಯ ಎಂದು ನಂಬಿರುತ್ತೇವೋ ಅದನ್ನು ಬೇರೆ ದಿಕ್ಕಿನಿಂದ ಪರಾಮರ್ಶಿಸಿ ನಮ್ಮನ್ನು ಯೋಚಿಸಲು ಹಚ್ಚುವುದೇ ಅಶೀಶ್ ನಂದಿಯವರ ಕ್ರಿಯಾಶೀಲತೆಯ ಮೂಲ ಆಶಯ. ಹೀಗೆ ಇವರು ಸ್ವಾತಂತ್ಯ್ರೋತ್ತರ ಭಾರತದ ಹಲವು ಘಟ್ಟಗಳನ್ನು ಹತ್ತಿರದಿಂದ ಪರಾಮರ್ಶಿಸಿದವರು. ಇವರ ಆಯ್ದ ಲೇಖನಗಳನ್ನು ಲೇಖಕರಾದ ಕೆ.ವಿ. ಸುಬ್ಬಣ್ಣ, ಅಕ್ಷರ ಕೆ.ವಿ. ಮತ್ತು ಜಸವಂತ ಜಾಧವ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಒಂದು ಮಹತ್ವದ ಕೃತಿ ಇದು.
ಕೆ.ವಿ. ಸುಬ್ಬಣ್ಣ ಕನ್ನಡದ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರು. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ. ಎ. ಪದವಿ ಪಡೆದ ನಂತರ ಅವರು ಕೃಷಿಕಾಯಕ ಆರಂಭಿಸಿದರು. ಸಾಹಿತ್ಯ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆ ಅಚ್ಚರಿಪಡುವ ಹಾಗಿದೆ. ಕವಿ, ನಾಟಕಕಾರ, ಅನುವಾದಕರಾಗಿದ್ದ ಅವರು 'ಅಕ್ಷರ ಪ್ರಕಾಶನ' 'ನೀನಾಸಂ ರಂಗ ಚಟುವಟಿಕೆ'ಗಳನ್ನು ನಿರ್ವಹಿಸಿದವರು. ಭಾರತೀಯ ಸಂಸ್ಕೃತಿಗೆ ವಿಶಿಷ್ಟ ಮಾದರಿ ಎನ್ನುವ ಹಾಗೆ ಸಾಹಿತ್ಯಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ಪುಟ್ಟಹಳ್ಳಿಯಲ್ಲಿ ನಡೆಸಿದ್ದು ಒಂದು ದಾಖಲೆ. ಮ್ಯಾಗ್ಸೆಸ್ಸೆ ಪ್ರಶಸ್ತಿಯಿಂದ ಹೆಗ್ಗೋಡು ಅಂತರರಾಷ್ಟ್ರೀಯ ನಕ್ಷೆಯಲ್ಲಿ ದಾಖಲಾಯಿತು. ಕೆ.ವಿ. ಸುಬ್ಬಣ್ಣ ಒಬ್ಬ ವ್ಯಕ್ತಿಯಲ್ಲ, ಮಹಾನ್ ಶಕ್ತಿ. ಅವರ ಬೆಳವಣಿಗೆ ವೈಯಕ್ತಿಕವಾದದ್ದಲ್ಲ, ಸಾಂಘಿಕವಾದದ್ದು. 'ಅಕ್ಷರ ಪ್ರಕಾಶನದ ಮೂಲಕ , 'ನೀನಾಸಂ' ಮೂಲಕ ಅನೇಕ ಪ್ರತಿಭೆಗಳನ್ನು ಅವರು ...
READ MORE