ಭಾರತೀಯ ತತ್ವಜ್ಞಾನಿ ಜಿಡ್ಡು ಕೃಷ್ಣಮೂರ್ತಿ ಅವರ ಕೃತಿ-ಶಿಕ್ಷಕನಿಗೆ ಶಿಕ್ಷಣ.ಈ ಕೃತಿಯನ್ನು ಭಾಷಾ ವಿಜ್ಞಾನಿ ಡಾ. ಬಿ.ಬಿ. ರಾಜಪುರೋಹಿತ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಶಿಕ್ಷಣ ನೀಡಬೇಕಾದವರು ಮೊದಲು ತಮಗೆ ತಾವೇ ಹೆಚ್ಚು ಶಿಕ್ಷಣವನ್ನು ಪಡೆಯಬೇಕಾಗುತ್ತದೆ. ಆಗಲೇ ಮತ್ತೊಬ್ಬರಿಗೆ ನೀಡುವ ಶಿಕ್ಷಣವು ಪರಣಾಮಕಾರಿಯಾಗಿರುತ್ತದೆ. ಏಕೆಂದರೆ, ಶಿಕ್ಷಣ ನೀಡಬೇಕಾದವರು ಮೊದಲು ಮಾದರಿಯಾಗಿರಬೇಕು. ವಿದ್ಯಾರ್ಥಿಗಳು ಅನುಕರುಣೆಯಿಂದಲೇ ಬಹುತೇಕ ವಿಷಯಗಳನ್ನು ಕಲಿಯುತ್ತಾರೆ ಎಂಬ ಎಚ್ಚರಿಕೆ ಶಿಕ್ಷಕರಿಗೆ ಇರಬೇಕು. ಇಂತಹ ಚಿಂತನೆಗಳ ಜಿಜ್ಞಾಸೆಯೇ ಈ ಕೃತಿ.
ಭಾಷಾ ವಿಜ್ಞಾನಿ ಬಿ.ಬಿ. ರಾಜಪುರೋಹಿತ ಅವರು ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳದವರು. 1935ರ ಮೇ 20ರಂದು ಜನಿಸಿದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪಿಎಚ್.ಡಿ. ಪಡೆದಿರುವ ಅವರು ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರು. ಕನ್ನಡ ವ್ಯಾಕರಣ, ಛಂದಸ್ಸು ಮತ್ತು ಅಲಂಕಾರ; ವಚನ ವ್ಯಾಕರಣ (ವ್ಯಾಕರಣ), ಬೇಂದ್ರೆ ಕಾವ್ಯ ಭಾಷೆ; ಕನ್ನಡವೆಲ್ಲ ಒಂದೇ, ಭಾಷೆ ಮತ್ತು ಅರ್ಥಗಳ ಗುಟ್ಟು; ಧ್ವನಿ ವಿಜ್ಞಾನ; ವ್ಯಾ-ಸಾ-ನು-ಭಾವ; ಧ್ವನಿಯ ಶ್ರಾವಣ ಮತ್ತು ಚಾಕ್ಷುಷ ರೂಪ; ವಚನ ಸಾಹಿತ್ಯದ ಭಾಷಾ ಶೈಲಿ (ಭಾಷಾ ವಿಜ್ಞಾನ). ಏಳು ಬೀಳಿನ ಕಡಲು; ಗಂಗಾವತರಣ; ಬೇಂದ್ರೆ ಕಾವ್ಯ ನಿಘಂಟು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. A ...
READ MORE