ಬೌದ್ಧ ಚಿಂತಕ ಆಚಾರ್ಯ ಧರ್ಮಾನಂದ ಕೋಸಂಬಿ ಅವರ ಪುತ್ರ ದಾಮೋದರ ಕೋಸಂಬಿ ಅವರು ಇತಿಹಾಸ, ಗಣಿತದಲ್ಲಿ ಪರಿಣಿತರಾದ ಚಿಂತಕರು. ದಾಮೋದರ ಅವರು ಭಗವದ್ಗೀತೆಯ ಸಾಮಾಜಿಕ ಅರ್ಥಿಕ ಸಂಗತಿಗಳ ಕುರಿತ ನೀಡಿದ ಒಳನೋಟ ಈ ಪುಸ್ತಕದ ಪ್ರಮುಖ ಸಂಗತಿ. ಕೋಸಾಂಬಿ ಅವರ ವಿಚಾರಗಳನ್ನು ಟಿ.ಎಸ್. ವೇಣುಗೋಪಾಲ್ ಮತ್ತು ಶೈಲಜಾ ಅವರು ಕನ್ನಡೀಕರಿಸಿದ್ದಾರೆ. ಭಗವದ್ಗೀತೆಯ ಸಾಮಾಜಿಕ ವ್ಯಾಖ್ಯಾನದಲ್ಲಿ ಇದೊಂದು ಮಹತ್ವದ ಕೃತಿ.
ಲೇಖಕ ಟಿ. ಎಸ್. ವೇಣುಗೋಪಾಲ್ ಅವರು ಮೈಸೂರಿನವರು. 1955 ಏಪ್ರಿಲ್ 24 ರಂದು ಜನನ. ಸಂಖ್ಯಾಶಾಸ್ತ್ರ ಪ್ರಾಧ್ಯಾಪಕ. ‘ವಾದಿ ಸಂವಾದಿ, ಧರೆಗಿಳಿದ ನಾಟ್ಯತಾರೆ, ಗಾನವಸಂತ, ಭಗವದ್ಗೀತೆ, ಸಾಮಾಜಿಕ ಆರ್ಥಿಕ ಸಂಗತಿಗಳ ಒಳನೋಟ, ಪುರಾಣ ಮತ್ತು ವಾಸ್ತವ’ ಮುಂತಾದ ಕೃತಿಗಳನ್ನು ಲೇಖಕಿ ಶೈಲಜಾ ಅವರೊಂದಿಗೆ ಸಂಪಾದಿಸಿದ್ದಾರೆ. ...
READ MORE