ಡಾ. ಬಿ.ಆರ್. ಅಂಬೇಡ್ಕರ್ ಅವರು 1928ರಲ್ಲಿಯೇ ’ದೇಶದ ಆದಾಯದಿಂದ ಮೊಟ್ಟಮೊದಲು ಖರ್ಚು ಮಾಡಬೇಕಾದ ಬಾಬು ಯಾವುದಾದರೂ ಇದ್ದರೆ ಅದು ತಳಸಮುದಾಯಗಳ ಶಿಕ್ಷಣಕ್ಕಾಗಿಯೇ ಎಂದು ಗುರುತಿಸಬೇಕು’ ಎಂದು ಅಭಿಪ್ರಾಯಪಟ್ಟಿದ್ದರು. ಅವರ ಆಶಯ-ಅಭಿಪ್ರಾಯದ ಮೇರೆಗೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಶೈಕ್ಷಣಿಕ ಪ್ರಗತಿಗಾಗಿ ವಿಶೇಷ ಅನುದಾನ ಮೀಸಲಿಡಲಾಗಿದೆ. ಆದರೆ, ಅದನ್ನು ಸರಿಯಾಗಿ ಬಳಸಿಕೊಳ್ಳದೇ ಮರಳಿ ಕಳುಹಿಸುವ ಹುನ್ನಾರ ನಡೆಯುತ್ತಿದೆ. ಅನುದಾನ ಬಳಸದೇ ಇರುವ ಕುರಿತು ಬೊಜ್ಜಾ ತಾರಕಂ ಅವರು ತೆಲುಗಿನಲ್ಲಿ ಬರೆದ ಪುಸ್ತಕವನ್ನು ಬಿ.ಸುಜ್ಞಾನಮೂರ್ತಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
©2024 Book Brahma Private Limited.