ಡಾ. ಬಿ.ಆರ್. ಅಂಬೇಡ್ಕರ್ ಅವರು ಬರೆದ ಚಿಂತನಾಪೂರ್ಣ ಕೃತಿಯನ್ನು ಲೇಖಕ ಎನ್.ಎಸ್. ಶಂಕರ ಅವರು ಕನ್ನಡಕ್ಕೆ ಅನುವಾದಿಸಿದ್ದೇ-ಬ್ರಾಹ್ಮಣಧರ್ಮದ ದಿಗ್ವಿಜಯ. 2007, 2012 ಹೀಗೆ ಎರಡು ಬಾರಿ ಮುದ್ರಣಗೊಂಡಿದೆ. ಸದ್ಯದ ಕೃತಿಯು 3ನೇ ಆವೃತ್ತಿ. ರಾಜಹತ್ಯೆ ಅಥವಾ ಪ್ರತಿಕ್ರಾಂತಿಯ ಉಗಮ ಎಂಬ ಉಪಶೀರ್ಷಿಕೆಯಡಿ ಮೂಲ ಕೃತಿ ಪ್ರಕಟಗೊಂಡಿದೆ.
ಮುಸ್ಲಿಂ ದಾಳಿಗಳ ಮುಂಚಿನ ಭಾರತದ ಇತಿಹಾಸವೆಂದರೆ, ಅದು ಬೌದ್ಧಧರ್ಮ ಹಾಗೂ ಬ್ರಾಹ್ಮಣರ ನಡುವಣ ಮಾರಕ ಕಾಳಗದ ಚಿತ್ರಣವೇ ಆಗಿದೆ. ಬ್ರಾಹ್ಮಣ ಧರ್ಮವು ಬೌದ್ಧಧರ್ಮವನ್ನು ವಿನಾಶಗೊಳಿಸುವ ರಾಜಕೀಯ ಅಧಿಕಾರ ಪಡೆಯಿತು, ಗುಡಿಸಿ ಸಾರಿಸುವ ಕೆಲಸ ಇಸ್ಲಾಂನಿಂದ ಆಗಿರಲಿಲ್ಲ. ಆದರೆ ಒಂದು ಧರ್ಮವಾಗಿ ಬೌದ್ಧ ತತ್ವವನ್ನು ಓಡಿಸಿ, ಆ ಸ್ಥಾನವನ್ನು ಬ್ರಾಹ್ಮಣಧರ್ಮ ತಾನು ಆಕ್ರಮಿಸಿಕೊಂಡಿತು’ ಎಂಬ ಅಂಬೇಡ್ಕರ್ ವಿಚಾರಗಳು ಕೃತಿಯ ಕೇಂದ್ರವಾಗಿವೆ.
ಲೇಖಕ, ಪತ್ರಕರ್ತ ಎನ್. ಎಸ್. ಶಂಕರ ಅವರು ‘ಸುದ್ದಿ ಸಂಗಾತಿ’ ಮತ್ತು ‘ಮುಂಗಾರು’ ಪತ್ರಿಕೆಯ ಸ್ಥಾಪಕರು. ಪ್ರಜಾವಾಣಿ, ಲಂಕೇಶ್ ಪತ್ರಿಕೆಯ ವರದಿಗಾರರಾಗಿಯೂ ಅನುಭವವಿದೆ. ಲಂಕೇಶರ ‘ಮುಟ್ಟಿಸಿಕೊಂಡವರು’ ಕತೆಯನ್ನು ಕಿರು ಚಿತ್ರವನ್ನಾಗಿಸಿ ದೃಶ್ಯಮಾಧ್ಯಮಕ್ಕೂ ಹೆಜ್ಜೆ ಇಟ್ಟವರು. ಅವರ ‘ಮಾನಸೋಲ್ಲಾಸ’ ಕಿರು ಚಿತ್ರ ಅಂತಾರಾಷ್ಟ್ರೀಯವಾಗಿ ಸದ್ದು ಮಾಡಿದೆ. ‘ಅರಸು ಯುಗ, ಚಂಚಲೆ’ ಅವರ ಕೃತಿಗಳು. ಸಮಕಾಲೀನ ಘಟನಾವಳಿಗಳು ಕುರಿತಂತೆ ಬರೆದ ಬರೆಹ ‘ಉಸಾಬರಿ’ ಅವರ ಇತ್ತಿಚಿನ ಕೃತಿ. ...
READ MORE