ಮಾತೆಯರು ಮಾನ್ಯರಾಗಿದ್ದಾಗ ಕೃತಿಯು ಮಹಿಳಾ ಕಣ್ಣೋಟದಲ್ಲಿ ಇತಿಹಾಸದ ಚಿತ್ರಣವನ್ನು ವಿವರಿಸಿರುವ ಕೃತಿ ಇದಾಗಿದೆ. ಕೃಷಿ, ಕರಕುಶಲ ಕೈಗಾರಿಕೆ ಆರಂಭಿಸಿಲು ಮಹಿಳೆಯರು ಕಾರಣ. ಮಹಿಳೆಯರೇ ಆರಂಭಿಸಿದ ಕೃಷಿಯ ಕುರಿತು ಈ ಕೃತಿಯು ಮಾಹಿತಿ ನೀಡಿದೆ. ದೇವಿಪ್ರಸಾದ್ ಚಟ್ಟೋಪಾಧ್ಯಾಯ ಅವರು ರಚಿಸಿರುವ ಕೃತಿಯನ್ನು ಜಿ. ಕುಮಾರಪ್ಪ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
ಕನ್ನಡ ಸಾಹಿತ್ಯ ವಲಯದಲ್ಲಿ ತನ್ನದೇ ಛಾಪು ಮೂಡಿಸಿದ್ದ ಬರಹಗಾರ ಅನುವಾದಕ ಜಿ. ಕುಮಾರಪ್ಪ ಅವರು ಚಿತ್ರದುರ್ಗ ಜಿಲ್ಲೆ, ಹೊಳಲ್ಕೆರೆ ತಾಲ್ಲೂಕಿನ ಬಸಾಪುರ ಗ್ರಾಮದವರು. ಕೋಲ್ಕತ್ತಾದ ಬಂಗಾಲಿ ನ್ಯಾಷನಲ್ ಗ್ರಂಥಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದ ಇವರು ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡಿದ್ದವರು. ಧೀಮಂತ, ಜಪಾನಿ ಹೈಕಗಳು ಕೃತಿಗಳನ್ನು ರಚಿಸಿರುವ ಇವರು ಬಂಗಾಲಿಯ ಹಲವಾರು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಮಾತೆಯರು ಮಾನ್ಯರಾಗಿದ್ದಾಗ, ಸಂಶೋಧನೆಯ ಹಾದಿ, ಪ್ರತಿರೋಧ ಮುಂತಾದವು ಇವರು ಅನುವಾದಿಸಿರುವ ಪ್ರಮುಖ ಕೃತಿಗಳು. ...
READ MORE