ಕಾರ್ಲ್‌ ಮಾರ್ಕ್ಸ್ ತತ್ವಶಾಸ್ತ್ರದ ಬಡತನ

Author : ನಾ. ದಿವಾಕರ

Pages 256

₹ 120.00




Year of Publication: 2017
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ಕಾರ್ಲ್‌‌ಮಾರ್ಕ್ಸ್‌‌ ಜನಿಸಿ ಎರಡು ಶತಮಾನಗಳು ಸಂದ ಹೊತ್ತಿನಲ್ಲಿ ಆತನ ಕೊಡುಗೆಗಳನ್ನು ವಿವಿಧ ಬಗೆಯಲ್ಲಿ ನೆನೆಯುವ ಕಾರ್ಯಗಳು ಜಗತ್ತಿನಾದ್ಯಂತ ನಡೆದವು. ಭಾರತವೂ ಅದಕ್ಕೆ ಹೊರತಾಗಿರಲಿಲ್ಲ. ಕೇರಳ ಮತ್ತು ಈಶಾನ್ಯ ರಾಜ್ಯಗಳ ಜನರಿಗೆ ಮಾರ್ಕ್ಸ್‌ ಮೇಲಿರುವ ಪ್ರೀತಿ ಸೈದ್ಧಾಂತಿಕ ಕಾರಣಗಳಿಗಾಗಿ ಮಾತ್ರವಲ್ಲದೆ ಚುನಾವಣಾ ರಾಜಕಾರಣದಲ್ಲಿ ಕೂಡ ವ್ಯಕ್ತವಾಗಿದೆ. ಇದು ಆತನ ಜನಪ್ರಿಯತೆಗೆ ಸಾಕ್ಷಿ. ಆದರೆ ಭಾರತದ ಮಾರ್ಕ್ಸ್‌‌ವಾದ ವಿಶಿಷ್ಟ ಲಕ್ಷಣಗಳನ್ನು ಹೊಂದಿದೆ. ಭಾರತೀಯ ಸಂದರ್ಭದ ಎಡಪಂಥೀಯ ವಿಚಾರಧಾರೆಗೆ ವಿಶಿಷ್ಟ ಲಕ್ಷಣವಿದೆ. ಮಾರ್ಕ್ಸ್‌‌ವಾದ ಮೊದಲು ಇಲ್ಲಿನ ಮೇಲ್ಜಾತಿಯವರನ್ನು ಆಕರ್ಷಿಸಿತು. ದಲಿತರು ಎಡಪಂಥೀಯ ಚಳವಳಿಯನ್ನು ಅನುಮಾನದಿಂದ ನೋಡುತ್ತ ದೂರವೇ ಉಳಿದರು. ಇದು ಕಮ್ಯುನಿಸಂಗೆ ಪೆಟ್ಟು ನೀಡಿದ್ದಂತೂ ನಿಜ. ಈಗ ’ಲಾಲ್‌-ನೀಲ್‌’ ಘೋಷಣೆಗಳು ಅಲ್ಲಲ್ಲಿ ಆಗಾಗ ಕೇಳಿಬರುತ್ತಿರುವುದು ಇದೇ ಕಾರಣಕ್ಕಾಗಿ. 

ಮಾರ್ಕ್ಸ್‌ ದ್ವಿಶತ ಜನ್ಮದಿನೋತ್ಸವದ ಅಂಗವಾಗಿ ದೇಶದ ಅನೇಕ ಕಡೆಗಳಂತೆ ಕರ್ನಾಟಕದಲ್ಲೂ ಹಲವು ಪ್ರಕಾಶಕರು ಮಾರ್ಕ್ಸ್‌ ಕೃತಿಗಳನ್ನು ಹೊರತಂದಿದ್ದಾರೆ. ಅವುಗಳಲ್ಲಿ ಲಡಾಯಿ ಪ್ರಕಾಶನದ 'ಕಾರ್ಲ್ ಮಾರ್ಕ್ಸ್-ತತ್ವಶಾಸ್ತ್ರದ ಬಡತನ' ಕೂಡ ಒಂದು. ಮಾರ್ಕ್ಸ್‌ವಾದ ಚಿಗುರುತ್ತಿದ್ದ ಹೊತ್ತಿನಲ್ಲಿ ಅದನ್ನು ಭಂಜಿಸುವ ಕೆಲಸಗಳೂ ಬೌದ್ಧಿಕ ಮಟ್ಟದಲ್ಲಿ ನಡೆಯುತ್ತಿದ್ದವು. ಪ್ರೊಧಾನ್‌ ಮಾರ್ಕ್ಸ್‌‌ವಾದದ ಕಟುಟೀಕಾಕಾರರಾಗಿದ್ದರು. ಆದರೆ ಇದಕ್ಕೆ ಮಾರ್ಕ್ಸ್‌ ಮತ್ತು ಏಂಗೆಲ್ಸ್‌ ನೀಡಿದ ಉತ್ತರ ರೂಪವೇ ಈ ಕೃತಿ. ಬಳಸಿರುವ ಭಾಷೆ ಸರಳವಾಗಿರುವುದರಿಂದ ಸಾಮಾನ್ಯ ಓದುಗರನ್ನೂ ಕೃತಿ ಆಕರ್ಷಿಸುತ್ತದೆ. ಮಾರ್ಕ್ಸ್‌‌ ಪ್ರಸ್ತುತತೆಯನ್ನು ಕೂಡ ಕೃತಿಯಲ್ಲಿ ಚರ್ಚಿಸಲಾಗಿದೆ. 

About the Author

ನಾ. ದಿವಾಕರ

ಚಿಂತಕ, ಲೇಖಕ ನಾ. ದಿವಾಕರ ಅವರು ಹುಟ್ಟಿದ ಊರು ಕೋಲಾರ ಜಿಲ್ಲೆಯ ಚಿಂತಾಮಣಿ. 1961ರಲ್ಲಿ ಜನಿಸಿದ ಅವರು ಬೆಳೆದದ್ದು ಅದೇ ಜಿಲ್ಲೆಯ ಬಂಗಾರಪೇಟೆಯಲ್ಲಿ. ಪೂರ್ಣ ವಿದ್ಯಾಭ್ಯಾಸ ಬಂಗಾರಪೇಟೆಯಲ್ಲಿ ಮುಗಿಸಿದ ಅವರು ಬಿಕಾಂ ವ್ಯಾಸಂಗವನ್ನು ಕೋಲಾರದ ಸರ್ಕಾರಿ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ವಿದ್ಯಾರ್ಥಿ ದೆಸೆಯಲ್ಲಿಯೇ ಗಾಯನ, ನಾಟಕಗಳಲ್ಲಿ ಆಸಕ್ತಿಯೊಂದಿದ್ದ ಅವರು, ಹಲವು ಗೀತ ಗಾಯನ ಸ್ಪರ್ಧೆ, ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಿಹಿಸಿದ್ದಾರೆ. ತುರ್ತುಪರಿಸ್ಥಿತಿಯ ಸಂದರ್ಭದ ನಂತರ ರಾಜಕೀಯದತ್ತ ಒಲವು ತೊರಿದ ದಿವಾಕರ್ ಕ್ರಮೇಣ ದಲಿತ ಚಳುವಳಿ ಮತ್ತು ಮಾರ್ಕ್ಸ್ ವಾದಿ ಅಧ್ಯಯನದತ್ತ ಒಲವು ಬೆಳೆಸಿಕೊಂಡರು. 1982ರಲ್ಲಿ ಪದವಿ ಮುಗಿಸಿ 1984ರಲ್ಲಿ ಕೆನರಾಬ್ಯಾಂಕ್ ...

READ MORE

Related Books