ಜೆರೆಮಿ ಸೀಬ್ರೂಕ್ ಬ್ರಿಟನ್ ನ ಪ್ರಖ್ಯಾತ ಚಿಂತಕ, ಬರಹಗಾರ ಮತ್ತು ಅಂಕಣಕಾರ, ನಲವತ್ತಕ್ಕೂ ಹೆಚ್ಚು ಪುಸ್ತಕ ರಚಿಸಿರುವ ಇವರು ಭಾರತ ಮತ್ತು ಬಾಂಗ್ಲಾದೇಶದ ಸಾಮಾಜಿಕ ಮತ್ತು ಸಾಂಸ್ಕೃತಿಕ ಪಲ್ಲಟಗಳು, ಪರಿಸರ, ಅಭಿವೃದ್ಧಿ ಸಂಕಥನಗಳು, ಆರ್ಥಿಕ ನೀತಿ ಮತ್ತು ಬಡತನ ಕುರಿತಂತೆ ವಿಶೇಷವಾಗಿ ಅಧ್ಯಯನ ಮಾಡಿದ್ದಾರೆ. ಅವರ ಅಭಿವೃದ್ಧಿಯ ಆಗು-ಹೋಗು ಜಾಗತೀಕರಣದ ಆಳ- ಹರಿವು, ಮನುಷ್ಯನ ಆಶೆ-ಹತಾಶೆ ಕುರಿತಾದ ಲೇಖನಗಳ ಕನ್ನಡಾನುವಾದ ಈ ಕೃತಿ. ಪರ್ತಕರ್ತರಾದ ಸುಗತ ಶ್ರೀನಿವಾಸರಾಜು ಮತ್ತು ರೋಸ್ಹಿ ಡಿ.ಸೋಜಾ ಅವರು ಈ ಲೇಖನಗಳನ್ನು ಕನ್ನಡೀಕರಿಸಿ ಸಂಪಾದಿಸಿದ್ದಾರೆ.
ಈ ಕೃತಿಗೆ ನಾಡಿನ ಸಾಕ್ಷಿಪ್ರಜ್ಞೆ ದೇವನೂರು ಮಹಾದೇವ ಅವರು ಬೆನ್ನುಡಿ ಬರೆದಿದ್ದಾರೆ. ‘ಮನುಷ್ಯನ ಸ್ವಾವಲಂಬನೆ, ಘನತೆ, ಸಮಾನತೆಗಳ ಹೃದಯ ಬಡಿತದಂತೆ ಇರುವ ಈ ಪುಟ್ಟ-ಪುಟ್ಟ ಲೇಖನಗಳ ಪುಸ್ತಿಕೆಯು ನಮ್ಮೊಡನೆ ಇದ್ದರೆ ನಾವೊಂದು ಒಳಗಣ್ಣು ಪಡೆದಂತೆ’ ಎನ್ನುತ್ತಾರೆ ದೇವನೂರು ಮಹಾದೇವ.
ಪತ್ರಕರ್ತ ಮತ್ತು ಬರಹಗಾರರೂ ಆಗಿರುವ ಸುಗತ ಶ್ರೀನಿವಾಸರಾಜು ಅವರು ಕನ್ನಡದ ಪ್ರಸಿದ್ಧ ಪ್ರತಿಕೆಗಳಲ್ಲಿ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ‘ಕನ್ನಡಪ್ರಭ’ ದಿನಪತ್ರಿಕೆಯ ಪ್ರಧಾನ ಸಂಪಾದಕರು ಮತ್ತು ‘ಏಷ್ಯಾನೆಟ್ ನ್ಯೂಸ್’ ನೆಟ್ ವರ್ಕ್ ಸಂಸ್ಥೆಯ ಸಂಪಾದಕೀಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ಸುಗತ ಅವರು ಅದಕ್ಕೂ ಮೊದಲು ‘ವಿಜಯ ಕರ್ನಾಟಕ’ ದಿನಪತ್ರಿಕೆಯ ಪ್ರಧಾನ ಸಂಪಾದಕರಾಗಿ, ಮತ್ತು ‘ಔಟ್ ಲುಕ್’ ರಾಷ್ಟ್ರೀಯ ವಾರಪತ್ರಿಕೆಯ ದಕ್ಷಿಣ ಭಾರತದ ಸಂಪಾದಕರಾಗಿಯೂ ಕೆಲಸ ಮಾಡಿದ್ದಾರೆ. ಇದಕ್ಕೂ ಮೊದಲು ‘ಹಿಂದೂಸ್ತಾನ್ ಟೈಮ್ಸ್’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳಲ್ಲೂ ಕಾರ್ಯನಿರ್ವಹಿಸಿದ್ದಾರೆ. ಉತ್ತರ ಅಮೆರಿಕದ ಪ್ರತಿಷ್ಠಿತ ಆ್ಯಸ್ಪೆನ್ ಇನ್ಸ್ಟಿಟ್ಯೂಟ್ ನ ಫೆಲೋ ಕೂಡಾ ಆಗಿದ್ದರು. ಭಾರತದ ಇಂಗ್ಲಿಷ್ ...
READ MORE