ದ ಪ್ರಿನ್ಸ್

Author : ಕೆ.ಎನ್. ವೆಂಕಟಸುಬ್ಬರಾವ್

Pages 126

₹ 199.00




Year of Publication: 2021
Published by: ಮಣಿಪಾಲ್ ಯೂನಿವರ್ಸಿಟಿ ಪ್ರೆಸ್
Address: ಅಡ್ವಾನ್ಸ್ಡ್ ರಿಸರ್ಚ್ ಸೆಂಟರ್‌, 5ನೇ ಮಹಡಿ, ಮಾಹೆ, ಮಣಿಪಾಲ್-576104
Phone: 0820 292 2516

Synopsys

ರಾಜತಂತ್ರಜ್ಞ ನಿಕಾಲೋ ಮೆಖೈವಲ್ಲಿಯ (1469-1527)  ರಾಜನೀತಿಯ ಕೈಪಿಡಿಯನ್ನು ಲೇಖಕ ಕೆ.ಎನ್. ವೆಂಕಟ ಸುಬ್ಬಾರಾವ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಅಧಿಕಾರ ಹಿಡಿಯಲು ತಂತ್ರ -ಸಂಚು-ರಾಜಿ ಮಾಡಿಕೊಳ್ಳಬಲ್ಲ ವ್ಯಕ್ತಿ. -ದಿ. ಪ್ರಿನ್ಸ್. ನೇರ- ಸೂಕ್ಷ್ಮ-ದ್ವಂದ್ವದಿಂದ ಕೂಡಿರುವ ವಿಭಿನ್ನ ಕೃತಿ ಇದು. ಅದರ ಒಳನೋಟಗಳು ಇಡೀ ಭೂಮಂಡಲದ ಅಧಿಕಾರ ರಾಜಕಾರಣದ ದರ್ಪಣದಲ್ಲಿ ಪ್ರತಿಫಲಿಸುತ್ತಲೇ ಇವೆ,  ಮೆಖೈವಲ್ಲಿಯು ಇಟಲಿಯ ಫ್ಲೇರೆನ್ಸ್ ನಗರದ ರಾಜತಾಂತ್ರಿಕ, ತತ್ವಜ್ಞಾನಿ, ಬರಹಗಾರ. ತನ್ನ 21ನೆಯ ವಯಸ್ಸಿನಲ್ಲಿ ಫ್ಲಾರೆಂಟೈನ್ ಪ್ರಾಂತ್ಯದ ರಾಜಕೀಯ ರಂಗ ಪ್ರವೇಶಿಸಿದ. ಫ್ಲಾರೆನ್ಸಿನ ಆಡಳಿತಕ್ಕೆ ಅಗತ್ಯ ಬೇಹುಗಾರಿಕೆ ಮಾಹಿತಿ ಒದಗಿಸುವುದು ಆತನ ಹೊಣೆಯಾಗಿತ್ತು. ಈ ವೇಳೆ, ಫ್ಲಾರೆನ್ಸ್ ಗಣರಾಜ್ಯ ಪತನಗೊಂಡಿತು. ರಾಜಕುಟುಂಬದ ವಿರುದ್ಧ ಪಿತೂರಿಯ ಆರೋಪಕ್ಕೆ ಗುರಿಯಾಗಿ ಮೆಖೈವಲ್ಲಿ ಅಧಿಕಾರಭ್ರಷ್ಟನಾಗಬೇಕಾಯಿತು. ನಂತರ, ಬರವಣಿಗೆಗೆ ಮೀಸಲಿಟ್ಟಿದ್ದ ಮೆಖೈವಲ್ಲಿ 58ನೇ ವಯಸ್ಸಿನಲ್ಲಿ (1527ರಲ್ಲಿ)  ನಿಧನ ಹೊಂದಿದೆ. 1532ರಲ್ಲಿ ಮುದ್ರಿತ `ಪ್ರಿನ್ಸಿಪೆ’, ಇಂಗ್ಲಿಷಿನಲ್ಲಿ `ದ ಪ್ರಿನ್ಸ್ ‘ ಆಗಿ (1640ರಲ್ಲಿ) ಪ್ರಕಟಗೊಂಡಿತ್ತು. ಯುರೋಪಿನ ವ್ಯಾಪ್ತಿಯೊಳಗೆಯೇ ಸಾಕಷ್ಟು ವದಂತಿಗಳಿಗೆ ಒಳಗಾಗಿದ್ದ  ಈ ಕೃತಿಯು ಈಗಲೂ ಚರ್ಚೆಗೆ ಗ್ರಾಸ ಒದಗಿಸುತ್ತಿದೆ. .

 

About the Author

ಕೆ.ಎನ್. ವೆಂಕಟಸುಬ್ಬರಾವ್

ರಾಜ್ಯದ ಸಾಂಸ್ಕೃತಿಕ ಮತ್ತು ಪತ್ರಿಕೋದ್ಯಮ ವಲಯಗಳಲ್ಲಿ ಕೆ.ಎನ್.ವಿ. ಎಂದೇ ಪರಿಚಿತರಾಗಿರುವ ಕಳಲೆ ನಾಗರಾಜರಾವ್ ವೆಂಕಟಸುಬ್ಬರಾವ್ ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರರು (ಮೈಸೂರು ವಿಶ್ವವಿದ್ಯಾನಿಲಯ). 1978ರಲ್ಲಿ ಉಪಸಂಪಾದಕರಾಗಿ ಕನ್ನಡ ದೈನಿಕ ಕನ್ನಡ ಪ್ರಭ ಪ್ರವೇಶಿಸಿದರು. ಪತ್ರಿಕೆಯ ಸುದ್ದಿ ಮೇಜು, ಸಾಪ್ತಾಹಿಕ ಪ್ರಭ ಮತ್ತು ಚಿತ್ರಪಭ ವಿಭಾಗಗಳಲ್ಲಿ ಕೆಲಸ ಮಾಡಿದರು. 1993ರಲ್ಲಿ ಹಿರಿಯ ವರದಿಗಾರರಾಗಿ ಇಂಗ್ಲೀಷ್ ದೈನಿಕ ದೈನಿಕ ದಿ ಹಿಂದು (ಬೆಂಗಳೂರು ಆವೃತ್ತಿ) ಸೇರಿದರು. 2011 ರಲ್ಲಿ ವಿಶೇಷ ವರದಿಗಾರರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಕೃತಿಗಳು: ಝೂಲಾಘಾಟ್ (1988), ತಂತ್ರ (2000), ಮೃಗ (2003)  ಇಂದ್ರಪ್ರಸ್ಥ (2009) ಹಾಗೂ ಜೂಜು ...

READ MORE

Related Books