ಮಹಾತ್ಮಾ ಗಾಂಧಿಯವರನ್ನು ಹತ್ತಿರದಿಂದ ನೋಡಿ, ಅವರಿಂದ ಸಾಕಷ್ಟು ಕಲಿತ ಮಹಾರಾಷ್ಟ್ರದ ಖ್ಯಾತ ಲೇಖಕರಾಗಿದ್ದ ಶ್ರೀಪಾದ ಜೋಷಿಯವರು ಸೇವಾ ಗ್ರಾಮದ ಪರಿಸರದಲ್ಲಿ ಕಂಡುಬರುತಿದ್ದ ಅನೇಕಾನೇಕ ಪ್ರಸಂಗಳನ್ನು ಕೃತಿಯಲ್ಲಿ ವಿವರಿಸಿದ್ದಾರೆ.
ಗಾಂಧಿ ಇಲ್ಲಿ ಮಹಾತ್ಮ ಎಂಬ ಚೌಕಟ್ಟಿನಿಂದ ಹೊರಬಂದು ಬೇರೆಯದೇ ವ್ಯಕ್ತಿತ್ವವಾಗಿ ಕಾಣುತ್ತಾರೆ. ಜೋಷಿಯವರು ತಮಗೆ ಗಾಂಧಿಯವರ ಸಂಪರ್ಕ ಬಂದ ರೀತಿ, ಅವರೊಡನೆ ವರ್ತಿಸುವಾಗ ತಮ್ಮ ಮನಸ್ಥಿತಿ ಹೇಗಿತ್ತು ಈ ಎಲ್ಲಾ ವಿಷಯಗಳ ಕುರಿತ ಮಾಹಿತಿಯನ್ನು ಲೇಖಕರು ಈ ಕೃತಿಯಲ್ಲಿ ನೀಡಿದ್ದಾರೆ.
©2024 Book Brahma Private Limited.