ಆಂಗ್ಲ ಲೇಖಕ ವೆಂಡಿ ಡೊನಿಗಲ್ ಅವರ ‘ದ ಹಿಂದೂಸ್: ಯಾನ್ ಆಲ್ಟರ್ನೇಟಿವ್ ಹಿಸ್ಟರಿ’ ಕೃತಿಯನ್ನು ಲೇಖಕ ಬಂಜಗೆರೆ ಜಯಪ್ರಕಾಶ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ-ಹಿಂದೂಗಳು...ಬೇರೊಂದು ಚರಿತ್ರೆ. ಯಾವುದೇ ದೇಶದ ಧರ್ಮದ ಚರಿತ್ರೆಯನ್ನು ಅಪೂರ್ಣವಾಗಿ ಹೇಳುವುದು, ದುರ್ಬಳಕೆ ಮಾಡಿಕೊಳ್ಳುವುದು ಸಲ್ಲದು. ವಿವಿಧ ಧರ್ಮಗಳ ಚೌಕಟ್ಟುಗಳಡಿ ಮೂಲ ಲೇಖಕರು ಚಿಂತನೆ ನಡೆಸಿದ್ದು, ಹಿಂದೂ ಧರ್ಮವು ಒಂದು ಧರ್ಮ ಎಂದು ಹೇಳಲಾಗದು. ಧರ್ಮದ ವ್ಯಾಖ್ಯಾನದಡಿ ಹಿಂದೂವನ್ನು ಸೇರಿಸಲಾಗದು ಎಂದು ಚರ್ಚಿಸುತ್ತಾರೆ. ಬೇರೆ ಭೇರೆ ಧರ್ಮದಲ್ಲಿರುವ ವೈಶಿಷ್ಟ್ಯಗಳನ್ನು ಎತ್ತಿ ತೋರಿಸಿ, ಮೂಲ ವ್ಯಾಖ್ಯಾನಿಸುವಲ್ಲೇ ಹಿಂದೂ ಧರ್ಮವು ಮೂಲ ಗುಣ- ಲಕ್ಷಣಗಳನ್ನು ಕಳೆದುಕೊಳ್ಳುತ್ತದೆ ಎಂದು ಗುರುತಿಸುತ್ತಾರೆ. ಇಂತಹ ವಿಷಯ-ಸಂಗತಿಗಳಿರುವ ಕೃತಿಯನ್ನು ಲೇಖಕರು ಸಮರ್ಥವಾಗಿ ಅನುವಾದಿಸಿದ್ದಾರೆ.
ಕವಿ, ಸಂಸ್ಕೃತಿ ಚಿಂತಕ, ವಿಮರ್ಶಕ, ಅಂಕಣಕಾರ, ಅನುವಾದಕ ಮತ್ತು ಜನಪರ ಹೋರಾಟಗಾರರಾಗಿರುವ ಬಂಜಗೆರೆ ಜಯಪ್ರಕಾಶ್ ಹುಟ್ಟಿದ್ದು ಜೂನ್ 17-1965ರಲ್ಲಿ. ಹಿಂದುಳಿದ ಬುಡಕಟ್ಟು ಜಾತಿಯ ರೈತಾಪಿ ಕುಟುಂಬದ ಹಿನ್ನೆಲೆ ಇರುವ ಬಂಜಗೆರೆ ಜಯಪ್ರಕಾಶ್ ಅವರು ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲೋಕಿನ ಬಂಜಗೆರೆಯವರು. ಹೊನ್ನಾರು ಸಾಹಿತ್ಯ ಮಾಸ ಪತ್ರಿಕೆಯ ಗೌರವ ಸಂಪಾದಕ. ಹಲವಾರು ಪತ್ರಿಕೆಗಳ ಅಂಕಣ ಬರಹಗಾರರಾಗಿದ್ದರು. ಚಳ್ಳಕೆರೆ ಚಿತ್ರದುರ್ಗಗಳಲ್ಲಿ ಪಿಯುಸಿವರೆಗೆ ವಿದ್ಯಾಭ್ಯಾಸ. 1985ರಲ್ಲಿ ಮೈಸೂರು ಮಹಾರಾಜ ಕಾಲೇಜಿನಿಂದ ಪತ್ರಿಕೋದ್ಯಮ ಪದವಿ. 1987 ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎಸ್.ಡಬ್ಲ್ಯು ಪದವಿ. ಕನ್ನಡ ವಿಶ್ವವಿದ್ಯಾಲಯದಿಂದ 1999ರಲ್ಲಿ ಡಾಕ್ಟರ್ ಆಫ್ ಲಿಟರೇಚರ್ (ಡಿ.ಲಿಟ್)ಪದವಿ. ಕಳೆದ ...
READ MORE