ವಿ. ಆರ್. ನಾರ್‍ಲಾ ಅವರು ಬರೆದಿರುವ ’ಭಾರತದ ಬೌದ್ಧಿಕ ದಾರಿದ್ರ್ಯ’ ಕೃತಿ ಧರ್ಮದ ಅಫೀಮಿಗೆ ತುತ್ತಾದ ಮನಸ್ಥಿತಿಗಳನ್ನು ವಿಶ್ಲೇಷಿಸುತ್ತದೆ. ಭಾವನಾತ್ಮಕ ಅಂಶಗಳೆಲ್ಲವನ್ನು ಬೌದ್ಧಿಕ ಬಡತನ ದೊಡ್ಡದಾಗಿ ಸ್ವೀಕರಿಸುತ್ತಿದೆ ಬದಲಿಗೆ ವಿಮರ್ಶೆಗೆ ಹಚ್ಚುವುದಿಲ್ಲ. ಪರಿಣಾಮ ಕಾಲ ಮುಂದಕ್ಕೆ ಸರಿದರೂ ಸಮಾಜ ಹಿಂದಕ್ಕೆ ಹೋಗುತ್ತಿದೆ. ಈ ಬಗೆಯ ಪ್ರಗತಿ ವಿರೋಧಿ ನಿಲುವು ಸಮಾಜಕ್ಕೆ ಮಾರಕವಾಗಿದೆ ಎಂದು ಕೃತಿ ಆತಂಕ ತೋಡಿಕೊಳ್ಳುತ್ತದೆ.
ಮನುಕುಲದ ಕಣ್ಣು ತೆರೆಸಬೇಕಿದ್ದ ಧರ್ಮಗಳು ವಿಷಕಾರುವ ಕೂಪಗಳಾಗಿರುವುದು, ವಿಜ್ಞಾನದ ಬದಲು ಅಜ್ಞಾನ ಮನೆ ಮಾಡುತ್ತಿರುವುದು, ಸಮಾನತೆಯ ಜಾಗದಲ್ಲಿ ಅಸಮತೆ ಹಾಜರಿ ಹಾಕಿರುವುದನ್ನು ಪುಸ್ತಕ ವಿರೋಧಿಸುತ್ತದೆ. ಪ್ರೊ. ಬಿ. ಗಂಗಾಧರ ಮೂರ್ತಿ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಲೇಖಕ ಪ್ರೊ. ಬಿ. ಗಂಗಾಧರ ಮೂರ್ತಿ ಅವರು ಮೂಲತಃ ಹೊಳೆನರಸೀಪುರದವರು. ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವೀಧರರು. ಸುಮಾರು 30 ಬೊಧನೆ ಮಾಡಿದವರು. ’’ನವ್ಯ ಕತೆಗಳು” ಅವರು ಬರೆದ ವಿಮರ್ಶಾ ಲೇಖನಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಪ್ರಶಸ್ತಿ ನೀಡಿ ಗೌರವಿಸಿದೆ. ಅನುವಾದ ಕ್ಷೇತ್ರದಲ್ಲಿ ಇವರ ಸೇವೆ ಗಮನಿಸಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಪ್ರಶಸ್ತಿ ನೀಡಿ ಗೌರವಿಸಿದೆ. ಸೂಫಿ ಕಲ್ಚರ್ ಸಂಪಾದಕ ಸಮಿತಿಯಲ್ಲಿ ಪ್ರವಾಚಕರಾಗಿದ್ದರು. ಭಾರತ ಜ್ಞಾನ-ವಿಜ್ಞಾನ ಸಮಿತಿ ಪ್ರಕಟಿಸುತ್ತಿದ್ದ ‘ಟೀಚರ್’ ಮಾಸಿಕದ ಮುಖ್ಯ ಸಂಪಾದಕರಾಗಿದ್ದರು. ಕರ್ನಾಟಕದ ಗೌರಿಬಿದನೂರು ನಗರದಲ್ಲಿ ವಾಸವಿದ್ದು, ವಿದುರಾಶ್ವತ ಫ್ರೀಡಂ ಮೆಮೊರಿಯಲ್ ಮ್ಯೂಜಿಯಂ ಸಂಸ್ಥೆಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ...
READ MORE