ಮಹಿಳೆಯರು, ಪುರುಷರಾದಿಯಾಗಿ ವಿಶ್ವದ ಎಲ್ಲ ಶ್ರಮಜೀವಿಗಳಿಗೆ ಮತ್ತು ಶ್ರಮಶೋಷಣೆಯನ್ನು ತೊಲಗಿಸಿ ಸಮಸಮಾಜವನ್ನು ಕಟ್ಟಬೇಕೆಂದು ಬಯಸುವ ಎಲ್ಲ ಜನರಿಗೆ, ಕಾರ್ಲ್ ಮಾರ್ಕ್ಸ್ ನ ಪ್ರಸಿದ್ಧ ಕೃತಿ ‘ಕ್ಯಾಪಿಟಲ್’ ಅನ್ನು, ಸಂಕ್ಷಿಪ್ತವಾಗಿ ಪರಿಚಯಿಸಲೆಂದು ರಂಗನಾಯಕಮ್ಮ ಅವರು ತೆಲುಗಿನಲ್ಲಿ ಬರೆದ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದವರು ಪಿ.ಎ.ಕುಮಾರ್ ಮತ್ತು ವಿ.ಎನ್.ಲಕ್ಷ್ಮೀನಾರಾಯಣ, ಮೈಸೂರು. ಕ್ಯಾಪಿಟಲ್ ನಂತಹ ಕೃತಿಯನ್ನು ಸರಳಗನ್ನಡದಲ್ಲಿ ಅನುವಾದಿಸಿದ್ದು ಈ ಕೃತಿಯ ಹೆಗ್ಗಳಿಕೆ.
ಹಾಸನ ಜಿಲ್ಲೆ, ಅರಸೀಕೆರೆ ತಾಲೂಕಿನ (ಜನನ: 06-05-1948) ಲಾಯಲಾಪುರ ಗ್ರಾಮದವರು. ಸಾಹಿತ್ಯ, ತತ್ವಶಾಸ್ತ್ರ, ಸಿನಿಮಾಕಲೆ, ಅನುವಾದ ಮತ್ತು ಎಡಪಂಥೀಯ ರಾಜಕೀಯದಲ್ಲಿ ಗಂಭೀರ ಆಸಕ್ತಿ. ‘ಆನೆ ಬಂತೊಂದಾನೆ’ (ಜಾನಪದ ಶಿಶುಗೀತೆಗಳು) ‘ಕನ್ನಡ ಕಲಿಯಿರಿ’ ( ವಯಸ್ಕರ ಶಿಕ್ಷಣ) ‘ನಿರಂತರ’ (ಸಾಹಿತ್ಯ ವಿಮರ್ಶೆ) ‘ಗಾಂಪ ಮಂಡಲ’ (ವಿಡಂಬನೆ) ‘ಕ್ಯಾಪ್ಟನ್ನನ ಮಗಳು’ (ಅನುವಾದ) ‘ಎರಡು ಕಣ್ಣು ಸಾಲದು’ (ಸಿನಿಮಾ ಕಲಾಮೀಮಾಂಸೆ) 'ಶ್ರಮಶೋಷಣೆಯ ವಿಶ್ವವನ್ನು ಬದಲಾಯಿಸಬೇಕು!' (ಸಹ ಅನುವಾದ) ಪ್ರಕಟಿತ ಕೃತಿಗಳು. ಮಾರ್ಕ್ಸ್ ನ ‘ಕ್ಯಾಪಿಟಲ್’ ಕೃತಿಯ ಅನುವಾದ ಕಾರ್ಯದಲ್ಲಿ ಇತರರೊಂದಿಗೆ ಸಹಯೋಗ. ನಿವೃತ್ತಿಯ ನಂತರ ಮೈಸೂರಿನಲ್ಲಿ ವಾಸ. ...
READ MORE