ಭಾರತದ ಸಂವಿಧಾನ ಶಿಲ್ಪಿ ಎಂದೇ ಖ್ಯಾತಿಯ ಡಾ. ಬಾಬಾಸಾಹೇಬ ಅಂಬೇಡ್ಕರರ ಹತ್ಯೆಯನ್ನು ಯಾರು, ಏಕೆ ಮತ್ತು ಹೇಗೆ ಮಾಡಿದರು ಎಂಬ ವಿಷಯವಾಗಿ ಮೂಲದಲ್ಲಿ ಡಾ. ವಿಲಾಸ ಖರಾತ್ ಅವರು ಮರಾಠಿಯಲ್ಲಿ ಬರೆದ ಕೃತಿಯನ್ನು ಲೇಖಕ ಜೆ.ಪಿ. ದೊಡಮನಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಡಾ. ಅಂಬೇಡ್ಕರರು ಅನಾರೋಗ್ಯದಿಂದ ಅಸುನೀಗಿದರು ಎಂಬುದೇ ಬಹುಜನರ ನಂಬಿಕೆ. ಆದರೆ, ಅವರನ್ನು ವ್ಯವಸ್ಥಿತವಾಗಿ ಹತ್ಯೆ ಮಾಡಲಾಗಿದೆ ಎಂಬ ತರ್ಕದೊಂದಿಗೆ ಈ ಸಂಶೋಧನೆಯು ಹತ್ಯು ಹಲವು ಚಾರಿತ್ರಿಕ ಮಗ್ಗಲುಗಳಿಂದ ಮಾಹಿತಿಗಳನ್ನು ಹೆಕ್ಕಿ ತೆಗೆಯುತ್ತದೆ.
ಲೇಖಕ ಜೆ.ಪಿ. ದೊಡಮನಿ ಮೂಲತಃ ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ತೇರದಾಳ ಪಟ್ಟಣದವರು. ತೇರದಾಳದ ಸರಕಾರಿ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆ ಹಾಗೂ ಶ್ರೀ ಪ್ರಭುಲಿಂಗ ಹೈಸ್ಕೂಲಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಪಡೆದ ಅವರು, ಶ್ರೀ ಶಿವಾನಂದ ಕಾಲೇಜು, ಕಾಗವಾಡ ಹಾಗೂ ಕಲಾ ವಾಣಿಜ್ಯ ಮಹಾವಿದ್ಯಾಲಯ, ರಾಯಬಾಗದಲ್ಲಿ ಪಿ. ಯು. ಸಿ. ಹಾಗೂ 1987ರಲ್ಲಿ ಬಿ. ಎ. (ಕನ್ನಡ ಮೇಜರ್) ಪದವಿ ಪಡೆದರು. ಕರ್ನಾಟಕ ವಿಶ್ವವಿದ್ಯಾಲಯ, ಕನ್ನಡ ಅಧ್ಯಯನ ಪೀಠದಿಂದ 1989ರಲ್ಲಿ ಕನ್ನಡ ಎಂ.ಎ, 1991ರಲ್ಲಿ ಡಿಪ್ಲೋಮಾ ಇನ್ ಜೈನಾಲಜಿ, 1993ರಲ್ಲಿ ವಿಶ್ವವಿದ್ಯಾಲಯದ ಧನಸಹಾಯ ಆಯೋಗ ನಡೆಸಿದ ...
READ MORE