ತತ್ತ್ವಶಾಸ್ತ್ರ ಪ್ರಾಧ್ಯಾಪಕ ವಿಲ್ ಡ್ಯೂರಾಂಟ್ (1885-81) ಅವರ ನಾಗರಿಕತೆಯ ಇತಿಹಾಸದ ಮೊದಲ ಸಂಪುಟ ಇದು. ನಾಗರಿಕತೆಯು ಮಾನವನ ಪ್ರಪಂಚದಲ್ಲಿ ಮೊಳಕೆಯೊಡೆದ ಕಾಲದಿಂದ ಮಹಾತ್ಮ ಗಾಂಧಿ, ಚಿಯಾಂಗ್ ಕೈ-ಷೇಕ್ ವರೆಗಿನ, ಅಂದರೆ 1930ರ ವರೆಗಿನ ನಾಗರಿಕತೆಯ ಚರಿತ್ರೆಯನ್ನು ಪ್ರೌಢವಾಗಿ ತಿಳಿಸುವ ಈ ಸಂಪುಟ ನಾಗರಿಕತೆಯ ಮೂಲಗಳು. ಸುಮೇರಿಯಾ, ಈಜಿಪ್ಟ್, ಬ್ಯಾಬಿಲೋನಿಯಾ,ಅಸ್ಸೀರಿಯಾ, ಪ್ಯಾಲೆಸ್ಟೈನ್, ಈಜಿಪ್ಟ್, ಭಾರತ, ಚೀನಾ, ಜಪಾನ್ ದೇಶಗಳ ಸಂಸ್ಕೃತಿ, ಆರ್ಥಿಕ ಜೀವನ, ಕಲೆ, ಸಾಹಿತ್ಯ, ಧರ್ಮ ಮತ್ತು ತತ್ತ್ವಶಾಸ್ತ್ರ ಕುರಿತು ಲೇಖಕರು ಕೃತಿಯಲ್ಲಿ ವಿವರಿಸಿದ್ದಾರೆ.
©2024 Book Brahma Private Limited.