ಲೇಖಕ ಇರ್ಫಾನ್ ಹಬೀಬ್ ಅವರ ಮೂಲಕೃತಿಯನ್ನು ಕನ್ನಡಕ್ಕೆ ಬಿ. ಸುಜ್ಞಾನಮೂರ್ತಿಯವರು ’ಭಾರತ ಚರಿತ್ರೆಯಲ್ಲಿ ರೈತ’ ಎಂಬ ಅನುವಾದದೊಂದಿಗೆ ತಂದಿದ್ದಾರೆ.
ಭಾರತದ ಚರಿತ್ರೆಯಲ್ಲಿ ರೈತ ಹೇಗೆ ಹುಟ್ಟಿದ, ಯಾವ ಯಾವ ದಾರಿಯಲ್ಲಿ ಅವನ ಪಯಣ ಸಾಗಿದೆ, ಜಾತಿಗಳು ಯಾವ ರೀತಿ ಉಂಟಾದವು, ಚರಿತ್ರೆಯಲ್ಲಿ ಎಂತಹ ಪಾತ್ರ ನಿರ್ವಹಿಸಿದವು,
ಭಾರತದ ಚರಿತ್ರೆಯಲ್ಲಿ ಇಲ್ಲಿಯವರೆಗೆ ಅತ್ಯಂತ ಪ್ರಮುಖವಾದ ಘಟನೆಗಳೆಲ್ಲವುಗಳಿಗೆ ರೈತವರ್ಗವೇ ಕೇಂದ್ರಸ್ಥಾನವಾಗಿದೆ. ಅಂದಿನ ಮತ್ತು ಇಂದಿನ ಹಲವು ತೀವ್ರ ಸಮಸ್ಯೆಗಳು ಒಟ್ಟಾರೆ ರೈತವರ್ಗದ ಸಮಸ್ಯೆಗಳೇ ಆಗಿವೆ. ಅಸ್ಪಶ್ಯರ ಹುಟ್ಟು ಬೆಳವಣಿಗೆಗಳೇನು, ಯುರೋಪ್ ರೈತರ ಬೆಳವಣಿಗೆಗೂ ಭಾರತ ದೇಶದ ರೈತರಿಗೂ ವ್ಯತ್ಯಾಸವೇನು, ಭಾರತ ದೇಶದಲ್ಲಿ ರೈತಾಪಿವರ್ಗ ಯಾಕೆ ಸಂಘಟಿತವಾಗದೆ ಹೋಯಿತು. ಮೊದಲಾದ ಪ್ರಶ್ನೆಗಳ ಕಡೆ ದೃಷ್ಟಿ ಹರಿಸುವಂತೆ ಮತ್ತು ಆಲೋಚಿಸುವಂತೆ ಮಾಡುವ ಚಾರಿತ್ರಿಕ ವಿಶ್ಲೇಷಣೆಯನ್ನು ಈ ಪುಸ್ತಕ ನೀಡುತ್ತದೆ.
©2024 Book Brahma Private Limited.