‘ಜೀವಕೋಶಗಳ ಸಂಭ್ರಮಾಚರಣೆ’ ಕ್ಯಾನ್ಸರ್ ನ ಸ್ವರೂಪ, ಅದರ ಕಾರಣಗಳು, ಚಿಕಿತ್ಸೆ ಮತ್ತು ಪರಿಹಾರದ ವಿಸ್ತೃತ ವಿವರಣೆ ಈ ಕೃತಿಯಲ್ಲಿದೆ. ಪ್ರಾಯಶಃ ಅದು ಕ್ಯಾನ್ಸರ್ ರೋಗಿಗಳಿಗೆ ಕ್ಯಾನ್ಸರ್ ಮತ್ತು ಅದರ ಚಿಕಿತ್ಸೆಯಿಂದ ಉದ್ಭವಿಸುವ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಸಮಸ್ಯೆಗಳನ್ನು ತಿಳಿದುಕೊಳ್ಳಲು, ಒಪ್ಪಿಕೊಳ್ಳಲು ಮತ್ತು ತಾಳಿಕೊಳ್ಳಲು ಸಹಾಯ ಮಾಡುತ್ತದೆ. ವೈದ್ಯರು ಮತ್ತು ದೇವರು, ಕುಟುಂಬ ಮತ್ತು ಸ್ನೇಹಿತರು, ನಿಸರ್ಗ ಮತ್ತು ಪರಿಸರ, ಆಹಾರ ಮತ್ತು ಹಣ್ಣುಗಳು, ಕಾಯಕ ಮತ್ತು ಸೃಜನಶೀಲತೆ, ಯೋಗ ಮತ್ತು ವ್ಯಾಯಾಮ, ಮನಸ್ಸು ಮತ್ತು ದೃಷ್ಟಿಕೋನಗಳಲ್ಲಿಯ ನಂಬುಗೆಯ ಬಗ್ಗೆ ಒತ್ತುಕೊಡಲಾಗಿದೆ. ಈ ಅಂಶಗಳು ಸಹಜ ಮತ್ತು ಕ್ಯಾನ್ಸರ್ ಜೀವಕೋಶಗಳನ್ನು ಹೇಗೆ ಪ್ರಭಾವಿತಗೊಳಿಸುತ್ತವೆ ಎಂಬುದನ್ನು ಲೇಖಕರ ಅನುಭವದ ವಿವರಣೆಯೊಡನೆ ವಿವರಿಸಲಾಗಿದೆ. ಆರ್.ಎಂ. ಲಾಲಾ ಅವರು ರಚಿಸಿದ ಈ ಕೃತಿಯನ್ನು ಡಾ.ಪಿ.ಎಸ್. ಶಂಕರ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
©2024 Book Brahma Private Limited.