ಲೇಖಕ ರಿಚರ್ಡ್ ಎಂ. ಈಟನ್ ಬರೆದಿರುವ ಮೂಲ ಕೃತಿಯನ್ನು ಕನ್ನಡಕ್ಕೆ ’ ಮಂದಿರ ಅಪವಿತ್ರೀಕರಣ ಮತ್ತು ಇಂಡೊ-ಮುಸ್ಲಿಂ ಸಾಮ್ರಾಜ್ಯಗಳು’ ಎಂಬ ಕನ್ನಡ ಅನುವಾದದಲ್ಲಿ ಸುರೇಶ ಭಟ್ ಬಾಕ್ರಬೈಲ್ ಅವರು ತಂದಿದ್ದಾರೆ.
ಜನಾಂಗೀಯವಾದಿ ಮತೀಯವಾದಿ ಸಿದ್ಧಾಂತಗಳು ಗತದ ವೈಭವೀಕರಣದೊಂದಿಗೆ ಕಾಲ್ಪನಿಕ ಶತ್ರುಗಳನ್ನು ಬೇಡುವಂತದ್ದು. ಹುಸಿ ರಾಷ್ಟ್ರೀಯತೆಯನ್ನು ಹುಟ್ಟುಹಾಕಿದ ಫ್ಯಾಸಿಸರಿಗೆ, ನಾಜಿಗಳಿಗೆ ವಲಸೆಗಾರರು ಶತ್ರುಗಳಾದರು. ಇದೇ ಫ್ಯಾಸಿಸಂ ಸಿದ್ದಾಂತದಿಂದ ಪ್ರೇರಿತವಾದ ಬ್ರಾಹ್ಮಣರ ಒಂದು ವರ್ಗ ಆರ್ಯ ಶ್ರೇಷ್ಠತೆಯ ಹಿಂದೂ ರಾಷ್ಟ್ರದ ಕನಸು ಕಂಡಿತು. ಮತಗಳು ಸ್ವದೇಶಿ ಮತ್ತು ವಿದೇಶಿ ಎಂದು ವಿಂಗಡಣೆಗೆ ಒಳಗಾದವು. ಅದಕ್ಕೆ ಮೊದಲು ಜೈನ, ಬೌದ್ಧ, ಸಿಖ್, ಬಸವ, ನಾರಾಯಣ ಗುರು ಮೊದಲಾದ ಮತಗಳನ್ನು ಹಿಂದೂ ಧರ್ಮವೆಂಬ ವಿಶಾಲತೆಯಲ್ಲಿ ಸೇರಿಸಿಕೊಂಡರು.
ಹಿಂದೂ ಧರ್ಮವೊಂದೆ ಸ್ವದೇಶಿ ಮತವೆಂದು ಸಾರಿ ಅದರ ಅನುಯಾಯಿಗಳೆಲ್ಲ ಪ್ರಥಮ ದರ್ಜೆಯ ಪ್ರಜೆಗಳು ಎಂದರು. ಇಸ್ಲಾಂ, ಕ್ರೈಸ್ತ, ಯಹೂದ್ಯ, ಪಾರಸಿ ಮತಗಳು ಹೊರಗಿನಿಂದ ಬಂದವುಗಳು ಎನ್ನುತ್ತ ಈ “ವಿದೇಶಿ' ಮತಾನುಯಾಯಿಗಳನ್ನು ದ್ವಿತೀಯ ದರ್ಜೆಯ ಪ್ರಜೆಗಳೆಂದು ಕರೆದರು. ಅನ್ಯ ಮತೀಯರೆಲ್ಲ ಕ್ರೂರಿಗಳು, ಮತಾಂತರಿಗಳು, ಹಿಂದೂ ಮಂದಿರಗಳನ್ನು ನಾಶಪಡಿಸಿದವರೆಂದು ಬಿಂಬಿಸುವ ಕಾರ್ಯ ಸಾಹಿತ್ಯ, ಕಲೆ, ಶಿಕ್ಷಣ ಮೊದಲಾದ ವಿವಿಧ ಕ್ಷೇತ್ರಗಳ ಮೂಲಕ ಸಮಾಜದ ವಿವಿಧ ಸ್ಥರಗಳಲ್ಲಿ ನಿರಂತರವಾಗಿ ಸಾಗಿದೆ.
’ಮಂದಿರ ಅಪವಿತ್ರೀಕರಣ ಮತ್ತು ಇಂಡೊ-ಮುಸ್ಲಿಂ ಸಾಮ್ರಾಜ್ಯಗಳು’ ಕೃತಿಯು ಇವುಗಳ ಹಿನ್ನಲೆಯಲ್ಲಿ ವೈಚಾರಿಕ ನಿಲುವುಗಳನ್ನು ಓದುಗರಿಗೆ ನೀಡಿದೆ.
©2024 Book Brahma Private Limited.