ಖ್ಯಾತ ಲೇಖಕ ಅರವಿಂದ ಗುಪ್ತ ಅವರ ಇಂಗ್ಲಿಷ್ ಕೃತಿಯನ್ನು ಲೇಖಕಿ ರತ್ನಾ ಮಣೂರು ಅವರು ಕನ್ನಡಕ್ಕೆ ಅನುವಾದಿಸಿ ಕೃತಿಯೇ-ಆಟ ಪಾಠದಲ್ಲಿ. ವಿಜ್ಞಾನದ ಸರಳ ಹಾಗೂ ಕುತೂಹಲಕಾರಿ ಸಂಗತಿಗಳನ್ನು ಸಂಕಲಿಸಿ ಮಕ್ಕಳೀಗೆ ಸರಳವಾಗಿ ತಿಳಿಯುವಂತೆ ಮಾಡುವ ಮೂಲಕ ಕೃತಿ ರಚನೆಯ ಉದ್ದೇಶವನ್ನು ಸಾರ್ಥಕಗೊಳಿಸಿದೆ. ಈ ಕೃತಿಯು ಮಕ್ಕಳ ಮನೋವಿಕಾಸಕ್ಕೆ ಪೂರಕವಾಗಿದೆ. ಅವರ ಕಲ್ಪನಾ ವಿಸ್ತಾರಕ್ಕೂ ನೆರವಾಗುತ್ತದೆ. ವಿಜ್ಞಾನದಲ್ಲಿ ಮಕ್ಕಳ ಆಸಕ್ತಿ ಹೆಚ್ಚುವಂತೆ ಪ್ರೇರಣಾದಾಯಕ ಅಂಶಗಳು ಈ ಕೃತಿಯ ಹೆಚ್ಚುಗಾರಿಕೆಯಾಗಿದೆ.
ರತ್ನಾ ಮಣೂರ ಅವರು ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಸಹಾಯಕ ಕುಲಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ತಂದೆ ಆರ್. ಕೆ. ಜೋಶಿ, ತಾಯಿ ಶಾಮಲಾಬಾಯಿ. ಪತಿ ಶ್ರೀಕಾಂತ ಆಚಾರ್ಯ ಮಣೂರ. ಕೃತಿಗಳು: ವಿಜ್ಞಾನಕ್ಕೆ ದಾರಿ (ಅನುವಾದ), ಆಟ ಪಾಠದಲ್ಲಿ, ನೋಡು ಮತ್ತು ಕಲಿ, ತಂತ್ರವಿದ್ಯೆಯ ಹಾದಿಯಲ್ಲಿ (ಅನುವಾದ) ಉರ್ದುವಿನ ಕತೆ (ಅನುವಾದ), ಹತ್ತೊಂಬತ್ತನೆಯ ಶತಮಾನದ ವಿಖ್ಯಾತ ವಿಜ್ಞಾನಿಗಳು, ಶಾಂತಿಸ್ವರೂಪ ಭಟ್ನಾಗರ್. ...
READ MORE