ಕಳೆದ ಅಂದರೆ 20ನೇ ಶತಮಾನದ ಬದುಕನ್ನು ಬದಲಿಸಿದ, ಪ್ರೇರೇಪಿಸಿದ ಹಲವು ಚಿಂತನಾ ಧಾರೆಗಳಲ್ಲಿ ಸಮಾಜವಾದವೂ ಒಂದು. ವೈಜ್ಞಾನಿಕ ಸಮಾಜವಾದದ ಸ್ವರೂಪ ಅದರ ಮಹತ್ವವನ್ನು ವಿವರಿಸುವ ಲೇಖಕರು ಅದಕ್ಕೆ ಪ್ರತಿಕ್ರಿಯೆಯಾಗಿ ಕಾಲ್ಪನಿಕ ಸಮಾಜವಾದವು ಹುಟ್ಟಿ ಬೆಳೆದ ಪರಿಯನ್ನು ಅವಲೋಕಿಸುತ್ತಾರೆ. ಎರಡರ ನಡುವಿ ಭಿನ್ನತೆಗಳನ್ನು ಕಟ್ಟಿಕೊಡುವ ಕೃತಿಯಿದು. ಫ್ರೆಡ್ರಿಕ್ ಏಂಜೆಲ್ ಅವರ ಕೃತಿಯನ್ನು ನಾ. ದಿವಾಕರ ಅವರು ಕನ್ನಡೀಕರಿಸಿದ್ದಾರೆ.
ಚಿಂತಕ, ಲೇಖಕ ನಾ. ದಿವಾಕರ ಅವರು ಹುಟ್ಟಿದ ಊರು ಕೋಲಾರ ಜಿಲ್ಲೆಯ ಚಿಂತಾಮಣಿ. 1961ರಲ್ಲಿ ಜನಿಸಿದ ಅವರು ಬೆಳೆದದ್ದು ಅದೇ ಜಿಲ್ಲೆಯ ಬಂಗಾರಪೇಟೆಯಲ್ಲಿ. ಪೂರ್ಣ ವಿದ್ಯಾಭ್ಯಾಸ ಬಂಗಾರಪೇಟೆಯಲ್ಲಿ ಮುಗಿಸಿದ ಅವರು ಬಿಕಾಂ ವ್ಯಾಸಂಗವನ್ನು ಕೋಲಾರದ ಸರ್ಕಾರಿ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ವಿದ್ಯಾರ್ಥಿ ದೆಸೆಯಲ್ಲಿಯೇ ಗಾಯನ, ನಾಟಕಗಳಲ್ಲಿ ಆಸಕ್ತಿಯೊಂದಿದ್ದ ಅವರು, ಹಲವು ಗೀತ ಗಾಯನ ಸ್ಪರ್ಧೆ, ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಿಹಿಸಿದ್ದಾರೆ. ತುರ್ತುಪರಿಸ್ಥಿತಿಯ ಸಂದರ್ಭದ ನಂತರ ರಾಜಕೀಯದತ್ತ ಒಲವು ತೊರಿದ ದಿವಾಕರ್ ಕ್ರಮೇಣ ದಲಿತ ಚಳುವಳಿ ಮತ್ತು ಮಾರ್ಕ್ಸ್ ವಾದಿ ಅಧ್ಯಯನದತ್ತ ಒಲವು ಬೆಳೆಸಿಕೊಂಡರು. 1982ರಲ್ಲಿ ಪದವಿ ಮುಗಿಸಿ 1984ರಲ್ಲಿ ಕೆನರಾಬ್ಯಾಂಕ್ ...
READ MORE