ಅಧ್ಯಾತ್ಮ ಗುರು ಎಂದೇ ಖ್ಯಾತಿಯ ಓಶೋ ಅವರು ಮಾಂಡೂಕ್ಯ ಉಪನಿಷತ್ ಕುರಿತಂತೆ ಇಂಗ್ಲಿಷಿನಿಂದ ಬರೆದ ವಿಚಾರಗಳನ್ನು ಲೇಖಕ ಪ.ರಾ. ಕೃಷ್ಣಮೂರ್ತಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಭಾರತೀಯ ಚಿಂತನೆಯನ್ನು ಕೇಂದ್ರೀಕರಿಸಿರುವ ಉಪನಿಷತ್ತುಗಳು, ಬದುಕಿನಲ್ಲಿ ಮನುಷ್ಯ ವ್ಯಕ್ತಿಗತ ಮಟ್ಟದಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ಅನುಸರಿಸಬೇಕಾದ ಅಗತ್ಯ ಹಾಗೂ ಅನಿವಾರ್ಯತೆಯನ್ನು ಪ್ರತಿಪಾದಿಸಿದ, ವಿಶೇಷವಾಗಿ ಮಾಂಡೂಕ್ಯ ಉಪನಿಷತ್ ಕುರಿತಂತೆ ಸುದೀರ್ಘವಾಗಿ ಚಿಂತನೆ ನಡೆಸಿದ ಕೃತಿ ಇದು.
ಪ.ರಾ. ಕೃಷ್ಣಮೂರ್ತಿ ಅವರು ಸಂಸ್ಕಾರ ಭಾರತಿ ಕರ್ನಾಟಕ ದಕ್ಷಿಣ ವಿಭಾಗದ ಅಖಿಲ ಭಾರತೀಯ ಸಹ ಸಂಘಟನಾ ಕಾರ್ಯದರ್ಶಿಗಳು.ಮೂಲತಃ ಕೋಣಂದೂರಿನ (ಜನನ: 20-07-1951) ನಗರ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪೂರೈಸಿದರು. ಸದ್ಯ, ಸಂಸ್ಕಾರ ಭಾರತಿಯ ಆಗ್ರಾ ಕೇಂದ್ರ ಕಚೇರಿಯಲ್ಲಿದ್ದಾರೆ. ...
READ MORE