ಎರಿಕ್ ಜಾನ್ ಅರ್ನೆಸ್ಟ್ ಹಾಬ್ಸ್‌ಬಾಮ್ 21ನೆಯ ಶತಮಾನದ ಪ್ರಮುಖ ಚಿಂತಕ. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿದ್ದರು. ದೇಶದ ಜನರು ತಮ್ಮನ್ನು ದಮನಿಸುತ್ತಿದ್ದ ರಾಜ್ಯಾಡಳಿತ ಮತ್ತು ಊಳಿಗಮಾನ್ಯ ವ್ಯವಸ್ಥೆಯನ್ನು ಕೊನೆಗಾಣಿಸಲು ಕ್ರಾಂತಿಕಾರಿ ಹೋರಾಟಗಳನ್ನು ಕೈಗೊಂಡರು. 1848 ರಲ್ಲಿ ಫ್ರಾನ್ಸ್ ಸೇರಿದಂತೆ ಯುರೋಪಿನ ದೇಶಗಳಲ್ಲಿ ನಡೆದ ಕ್ರಾಂತಿ ಮತ್ತು ಅದರಿಂದ ಉಂಟಾದ ಪರಿಣಾಮ,ದುಷ್ಪರಿಣಾಗಳ ಕುರಿತು ಇಲ್ಲಿ ವಿವರಿಸಿದ್ದಾರೆ. ಇವರು ಯುರೋಪಿನಲ್ಲಾದ ಪರಿವರ್ತನೆಗಳ ಕುರಿತ ಚಿಂತನೆಗಳು ನಾಲ್ಕು ಅಧ್ಯಾಯಗಳಾಗಿ ಪ್ರಕಟಗೊಂಡಿದ್ದು ಅದನ್ನು ಲೇಖಕ ನಗರಗೆರೆ ರಮೇಶ್ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
ಗೌರಿಬಿದನೂರು ನ್ಯಾಷನಲ್ ಕಾಲೇಜು ಹಾಗೂ ಬೆಂಗಳೂರಿನ ಜಯನಗರ ನ್ಯಾಷನಲ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದ ಅವರು ಸದ್ಯ ನಿವೃತ್ತರಾಗಿ ಬೆಂಗಳೂರು ನಿವಾಸಿಯಾಗಿದ್ದಾರೆ. ಪ್ರಗತಿಪರ ಚಿಂತನೆ ಹಾಗೂ ಚಟುವಟಿಕೆಗಳಲ್ಲಿ ಆಸಕ್ತರಾಗಿರುವ ನಗರಗೆರೆ ರಮೇಶ ಅವರು ಅನುವಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ...
READ MORE