ಮಣಿಶಂಕರ್ ಅಯ್ಯರ್, ನಮ್ಮ ದೇಶದ ಬುದ್ಧಿಜೀವಿ ರಾಜಕಾರಣಿಗಳಲ್ಲಿ ಪ್ರಮುಖರು. ಕೇಂದ್ರದಲ್ಲಿ ಕಾಂಗ್ರೆಸ್ ನಾಯಕರಾಗಿ, ಸಚಿವರಾಗಿ ಸೇವೆ ಸಲ್ಲಿಸಿರುವ ಅವರು, ಪ್ರತಿಯೊಬ್ಬ ಭಾರತೀಯನು ಓದಲೇಬೇಕಾದ ಈ ಕೃತಿಯನ್ನು ರಚಿಸಿ ಸೆಕ್ಯುಲರ್ ಮಹಾ ಕಾರಣಕ್ಕೆ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ.
ನಮ್ಮ ನಾಡಿನ ಕೆಲವು ರಾಜಕಾರಣಿಗಳ ಸ್ವಾರ್ಥ ಹಾಗೂ ಎಡಬಿಡಂಗಿತನದಿಂದಾಗಿ ನಮ್ಮಲ್ಲಿಯೂ ಫ್ಯಾಶಿಸ್ಟರು ಅಧಿಕಾರದ ಗದ್ದುಗೆಯನ್ನು ಏರಿದ್ದಾರೆ. ಆ ಮೂಲಕ ನಾಡಿನ ತುಂಬಾ ಕೋಮುವಾದಿ ವಿಷಬೀಜ ಬಿತ್ತುವವರಿಗೆ ಅಪೂರ್ಣ ಅವಕಾಶ ಕಲ್ಪಿಸಿಕೊಡುತ್ತಿದ್ದಾರೆ. ಪರಿಣಾಮವಾಗಿ ಶಾಂತಿಪ್ರಿಯತೆಗೆ ಹೆಸರು ಮಾಡಿದ್ದ ನಮ್ಮ ನಾಡು ಒಂದು ಭಾರಿ ದುರಂತದೆಡೆಗೆ ಜಾರುತ್ತಿದೆ ಎನ್ನುತ್ತಾರೆ ಲೇಖಕ ರಾಹು. ಸೂಫಿ, ಸಂತರು, ಶರಣರು, ದಾಸರು ನಡೆದಾಡಿದ ಸಕಲ ಜೀವಿಗಳಿಗೆ ಲೇಸನ್ನೇ ಬಯಸಿದ ಕರುನಾಡಿನಲ್ಲಿ ಕೋಮುವಾದಿಗಳು ದ್ವೇಷದ ಕೊಳ್ಳಿ ಇಟ್ಟು ಗಹಗಹಿಸುತ್ತಿರುವುದು ಬಹು ದುಃಖದ ವಿಷಯ. ಈ ಮಹಾಕಾರ್ಯದಲ್ಲಿ ತೊಡಗಬಯಸುವ ಪ್ರತಿಯೊಬ್ಬರಿಗೂ ಈ ಗ್ರಂಥ ಒಂದು ಸಮರ್ಥ ಮಾರ್ಗದರ್ಶಿಯಾಗಬಲ್ಲದು. ಮಣಿಶಂಕರ್ ಅಯ್ಯರ್ ಅವರ ಮಹತ್ವದ ಕೃತಿಯನ್ನು ಅಷ್ಟೇ ಸೂಕ್ಷ್ಮವಾಗಿ ರಾಹು ಕನ್ನಡೀಕರಿಸಿದ್ದಾರೆ.
ರಾಹು ಎಂತಲೇ ಪ್ರಸಿದ್ಧರಾಗಿರುವ ಆರ್.ಕೆ. ಹುಡಗಿ ಅವರು ಜನಿಸಿದ್ದು ಬೀದರ್ ಜಿಲ್ಲೆ ಬಸವಕಲ್ಯಾಣ ತಾಲ್ಲೂಕಿನ ಮುಚಳಂಬ. ಕಲಬುರ್ಗಿ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ್ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿರುವ ಇವರು ಕಲಬುರಗಿ ರಂಗಾಯಣದ ನಿದೇರ್ಶಕರಾಗಿದ್ದರು. ಸಮುದಾಯ ಸಂಘಟನೆಯ ಸಂಚಾಲಕರಾಗಿಯೂ ಕೆಲಸ ಮಾಡಿದ್ದಾರೆ. ಇವರು ಅನುವಾದಿಸಿರುವ ಕೃತಿಗಳೆಂದರೆ ಆರನೇ ಹೆಂಡತಿ ಆತ್ಮಕತೆ, ಧರೆಹೊತ್ತಿ ಉರಿದಾಗ, ಭಾರತೀಯ ಮಹಿಳಾ ವಿಮೋಚನೆಯ ಆಂದೋಲನ, ಅಮ್ಮಿ, ಭಯೋತ್ಪಾಧಕ, ಜಾತಿ ವ್ಯವಸ್ಥೆ, ಸೆಕ್ಯುಲರ್ ವಾದ ಬುಡ ಬೇರು ಮುಂತಾದವು . ಇವರಿಗೆ ಕುವೆಂಪು ಭಾಷಾ ಭಾರತಿ ಗೌರವ ಪ್ರಶಸ್ತಿ, 2022ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ...
READ MORE