ದಲಿತ ಸಾಹಿತ್ಯವನ್ನು ಒಂದು ನಿರ್ದಿಷ್ಟ ಆವರಣದೊಳಗಿಟ್ಟು ನೋಡುವವರಿದ್ದಾರೆ. ಸಾಹಿತಿಗಳು, ವಿಮರ್ಶಕರಿಗೇ ಇಂತಹ ಪ್ರಕಾರದ ಬಗ್ಗೆ ಮಡಿವಂತಿಕೆ ಇರುವುದು ಸುಳ್ಳಲ್ಲ. ದಲಿತನಿಂದ ಮಾತ್ರ ದಲಿತ ಸಾಹಿತ್ಯ ಸೃಷ್ಟಿಯಾಗುತ್ತದೆಯೇ? ಬೇರೆಯವರು ದಲಿತರ ಬಗ್ಗೆ ಬರೆದರೆ ಅದನ್ನು ಹೇಗೆ ಪರಿಗಣಿಸುವುದು ಎಂಬ ಪ್ರಶ್ನೆಗಳಿವೆ. ಈ ಪ್ರಶ್ನೆ, ಸಂಶಯಗಳಿಗೆ ಉತ್ತರ ಕಂಡುಕೊಳ್ಳುವ ಯತ್ನ ಎಂಬಂತೆ ಹಿಂದಿಯ ಖ್ಯಾತ ಲೇಖಕ ಓಮ್ ಪ್ರಕಾಶ್ ವಾಲ್ಮೀಕಿ ದಲಿತ ಸಾಹಿತ್ಯಕ್ಕೆ ತನ್ನದೇ ಆದ ಪ್ರತ್ಯೇಕ ಸೌಂದರ್ಯಶಾಸ್ತ್ರದ ಅಗತ್ಯವಿದೆ ಎಂದು ಹೇಳುತ್ತಾರೆ. ಅವರು ಎತ್ತಿರುವ ಧ್ವನಿ ದಲಿತ ಸಾಹಿತ್ಯಕ್ಕೆ ವಿಶೇಷ ಪ್ರಾಮುಖ್ಯತೆ ನೀಡುವಲ್ಲಿ ಅನುಮಾನವೇ ಇಲ್ಲ.
ಅವರು ಹಿಂದಿ ಸಾಹಿತ್ಯ ಸಂದರ್ಭವನ್ನು ಇಟ್ಟುಕೊಂಡು ಚರ್ಚೆ ನಡೆಸಿದ್ದಾರಾದರೂ ಕನ್ನಡ ಸಾಹಿತ್ಯ ಸಂದರ್ಭಕ್ಕೆ ಅವು ಅನ್ವಯವಾಗುವುದರಿಂದ ಆರ್. ಪಿ. ಹೆಗಡೆ ಅವರ ಅನುವಾದ ಸಕಾಲಿಕವೂ ಮೌಲಿಕವೂ ಆಗಿದೆ. ಜೀವನದ ಬೇರೆ ಬೇರೆ ನೆಲೆಗಳನ್ನು ಮತ್ತು ದಲಿತ ಸಾಹಿತ್ಯವನ್ನು ಒಟ್ಟಿಗೆ ಇಟ್ಟು ನೋಡುವ ಯತ್ನ ಕೃತಿಯದ್ದು. .ದಲಿತ ಸಾಹಿತ್ಯದ ಪ್ರಸ್ತುತತೆ, ದಲಿತತ್ವದ ಅಭಿವ್ಯಕ್ತಿ, ವೈಚಾರಿಕತೆ ಮತ್ತು ದಾರ್ಶನಿಕತೆ, ರಾಜಕೀಯ, ಆರ್ಥಿಕ ಸಿದ್ದಾಂತಗಳನ್ನು ಇಲ್ಲಿ ಒರೆಗೆ ಹಚ್ಚಲಾಗಿದೆ.
©2024 Book Brahma Private Limited.