ಡಾ. ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಬದುಕಿನ ಅನುಭವಕ್ಕೆ ಬಂದ ಆರು ಪ್ರಮುಖ ಘಟನೆ-ಸನ್ನಿವೇಶಗಳನ್ನು ದಾಖಲಿಸಿದ್ದು, ಅವುಗಳನ್ನು ಲೇಖಕ ಡಾ. ಬಿ. ಗಂಗಾಧರ ಮೂರ್ತಿ ಅವರು ಕನ್ನಡಕ್ಕೆ ಅನುವಾದಿಸಿದ್ದೇ ಈ ಕೃತಿ-‘ಅನುಭವದ ಆರು ಕಥನಗಳು’. ಅಂಬೇಡ್ಕರ್ ಅವರು ಭಾರತದಲ್ಲಿಯ ಜಾತಿಯ ದಟ್ಟ ಪ್ರಭಾವ, ಅದರ ದುಷ್ಪರಿಣಾಮ, ಮನುಷ್ಯ ಕೀರ್ತಿಗೆ ಅಂಟಿದ ಕಳಂಕ ಹೀಗೆ ಚೆನ್ನಾಗಿ ಆರ್ಥ ಮಾಡಿಕೊಂಡ ಮತ್ತೊಬ್ಬ ನಾಯಕನಿಲ್ಲ. ಶತಶತಮಾನಗಳಿಂದ ದಲಿತ ಸಮೂಹವು ಶೋಷಣೆ ಅನುಭವಿಸುತ್ತಲೇ ಬಂದಿದ್ದು, ಅವರ ಒಗ್ಗೂಡುವಿಕೆ ಹಾಗೂ ಸಾಮಾಜಿಕವಾಗಿ ಎಲ್ಲ ಹಕ್ಕು ಬಾಧ್ಯತೆಗಳನ್ನು ಒದಗಿಸುವುದು ಅವರ ಮೂಲ ಗುರಿಯಾಗಿತ್ತು. ಈ ಕುರಿತು ಅವರು ಜಾಗೃತಿ ಸಭೆಗಳನ್ನು ಮಾಡಿದರು. ಮಹಾತ್ಮ ಗಾಂಧೀಜಿ ಸೇರಿದಂತೆ ಇತರೆ ಮುಖ್ಯ ನಾಯಕರೊಂದಿಗೂ ವಾದ ಮಾಡಿದರು. ದಲಿತರಿಗೆ ಮತದಾನದ ಹಕ್ಕು ನೀಡುವಂತೆ ಬ್ರಿಟಿಷರನ್ನು ತಮ್ಮ ವಾಗ್ಝರಿ ಮೂಲಕ ಮನವೊಲಿಸಿದರು. ಇಂತಹ ವಿಚಾರಗಳನ್ನು ಕಟ್ಟಿಕೊಡುವ ಕೃತಿ ಇದು. ಮಕ್ಕಳಿಗೆ ಡಾ. ಅಂಬೇಡ್ಕರರ ವಿಚಾರಗಳು ಸುಲಭವಾಗಿ ತಿಳಿಯಲಿ ಎಂಬ ಉದ್ದೇಶದೊಂದಿಗೆ ಈ ಕೃತಿ ಪ್ರಕಟಿಸಿದೆ ಎಂದು ಪ್ರಕಾಶಕರು ಹೇಳಿದ್ದಾರೆ.
©2024 Book Brahma Private Limited.