’ಇಂಟ್ಯೂಟಿವ್ ಇಂಟಲಿಜೆನ್ಸ್ ಪ್ರೋಗ್ರಾಮ್’ ಎಂಬ ಕೃತಿಯಲ್ಲಿ, ಲಕ್ಷಾಂತರ ರೂಪಾಯಿ ಡೊನೇಷನ್ ಕೊಟ್ಟು ದೂರದ ರಾಜ್ಯವೊಂದರ ಕಾಲೇಜಿಗೆ ಸೇರಿಸಿದಾಗ, ಅಲ್ಲಿ ನಡೆದ ಘಟನೆ, ಆ ಕ್ಷಣದ ಹೊಳಹುಗಳ ಕುರಿತು ಲೇಖಕ ಶ್ರೀನಿವಾಸ ಅರ್ಕ ವಿವರಿಸಿದ್ದಾರೆ. ಕೃತಿಯನ್ನು ಕೆ.ವೆಂಕಟೇಶ್ ಮತ್ತು ಬಿ.ಎನ್. ಅನಿಲ್‌ಕುಮಾರ್ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಆರೋಗ್ಯ, ಸಾಕ್ಷಾತ್ಕಾರ, ಸಂವಹನ, ಪ್ರೀತಿ, ಮತ್ತು ಸಂಬಂಧಗಳಲ್ಲಿ ಹೇಗೆ ವೈಯುಕ್ತಿಕ ಮತ್ತು ಸಾಮುದಾಯಿಕ ಹಿತವನ್ನು ಸಾಧಿಸುವುದರ ಕುರಿತು ಲೇಖಕರು ಮಾಹಿತಿ ನೀಡಿದ್ದಾರೆ.
ಪತ್ರಕರ್ತ, ಲೇಖಕ ಕೆ.ವೆಂಕಟೇಶ್ ಮೂಲತಃ ದೊಡ್ಡಬಳ್ಳಾಪುರದವರು. ದೊಡ್ಡಬಳ್ಳಾಪುರದ ಕೊಂಗಾಡಿಯಪ್ಪ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿರುವ ಅವರು ನಾಡಿನ ಪ್ರಮುಖ ಪತ್ರಿಕೆಯಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ...
READ MORE