ಜನಪ್ರಿಯ ಲೇಖಕ ಯಂಡಮೂರಿ ವೀರೇಂದ್ರನಾಥ್ ಅವರ ಆಲೋಚನೆಗಳು ಈ ಕೃತಿಯಲ್ಲಿ ವ್ಯಕ್ತವಾಗಿವೆ. ಯಂಡಮೂರಿ ಅವರ ಕಾದಂಬರಿ, ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಕೃತಿಗಳಲ್ಲಿ ಬರುವ ಸ್ಪೂರ್ತಿ ಹಾಗೂ ತಾರ್ಕಿಕ ಕತೆಗಳನ್ನು ಬಹಳ ಸ್ವಾರಸ್ಯಕರವಾಗಿ ಇಲ್ಲಿ ನೀಡಲಾಗಿದೆ. ಅವರ ವಿಭಿನ್ನ ಆಲೋಚನಾ ಕ್ರಮದ ಆಧುನಿಕ ಕತೆಗಳು ಓದುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ. ತೆಲುಗು ಮೂಲದ ಈ ಕೃತಿಯನ್ನು ಯತಿರಾಜ್ ವೀರಾಂಬುಧಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
ಕಥೆಗಾರ,ಲೇಖಕ, ಅನುವಾದಕ, ಕಾದಂಬರಿಗಾರರಾದ ಯತಿರಾಜ್ ವೀರಾಂಬುಧಿ 11-08-1957ರಂದು ಮೈಸೂರಿನಲ್ಲಿ ಜನಿಸಿದರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಮೈಸೂರಿನಲ್ಲೇ ಪೂರ್ಣಗೊಳಿಸಿದ ಅವರು ಮೈಸೂರು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್‌ನಲ್ಲಿ ಬಿ.ಇ (ಎಲೆಕ್ಟ್ರಿಕಲ್ ಪವರ್) ಮುಗಿಸಿದರು. ಬೆಂಗಳೂರು ಮತ್ತು ಸಲ್ತನತ್ ಆಫ್ ಒಮಾನ್‌ನಲ್ಲಿ ಕಾರ್ಯ ನಿರ್ವಹಿಸಿ 2013ರಲ್ಲಿ ನಿವೃತ್ತಿ ಪಡೆದಿದ್ದಾರೆ. ಯತಿರಾಜ್ ವೀರಾಂಬುಧಿಯವರ ಪ್ರಕಟಿತ ಕೃತಿಗಳು- ಆಪತ್ತಿಗೆ ಆಹ್ವಾನ, ಪರಿಶೋಧ, ಗಾಥೆ, ಮರದಡಿ ಮಳೆ, ಪಂಚಾನನ, ಜೀವನ್ಮುಖಿ, ಸಾಬೀತು, ಕುರುಡು ತಿರುವು, ಅವಿನಾಭಾವ, ಹಸ್ತಕ್ಷೇಪ, ಹಾಸುಹೊಕ್ಕು, ಕಪ್ಪು ನದಿ, ಉದ್ಯೋಗ ಪರ್ವ, ಕರೆದರೆ ಬಾರೆ..!, ಒಂದೊಂದಾಗಿ ಜಾರಿದರೆ, ರಣವೀಳ್ಯ, ಚಿರಸ್ಮಿತ, ಸುಖಿಯಾಗಿರು ...
READ MORE