ಭಾರತದ ಪ್ರಜಾಸತ್ತೆಯ ಸರ್ವಶ್ರೇಷ್ಠ ಇತಿಹಾಸಕಾರ ಎಂದು ವಿಶ್ವವಿಖ್ಯಾತ ಟೈಮ್ ಪತ್ರಿಕೆಯ ಪ್ರಶಂಸೆಗೆ ಭಾಜನರಾಗಿರುವ ಅಂತಾರಾಷ್ಟ್ರೀಯ ಕೀರ್ತಿಯ ಲೇಖಕ ರಾಮಚಂದ್ರ ಗುಹ ಅವರು ಈ ಕೃತಿಯನ್ನು ರಚಿಸಿದ್ಧಾರೆ. ಜಿ. ಎನ್. ರಂಗನಾಥರಾವ್ ಅವರು ಈ ಕೃತಿಯನ್ನೂ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಭಾರತದ ಸಾಂಸ್ಕೃತಿಕ ವೈವಿಧ್ಯತೆಯಂತೆಯೇ ಬಹುತ್ವದ ವಿವಿಧ ಆಯಾಮಗಳಿಗೆ ಅಭಿಮುಖವಾಗಿ ರೂಪುಗೊಂಡಿರುವ ಪ್ರಬುದ್ದ ರಚನೆಗಳಾಗಿವೆ. ಲೇಖನಗಳನ್ನು ಇಲ್ಲಿ ಎರಡು ಮುಖ್ಯ ಭಾಗಗಳಾಗಿ ವಿಂಗಡಿಸಲಾಗಿದೆ. ರಾಜಕಾರಣ ಮತ್ತು ಸಮಾಜ ಅಧ್ಯಾಯದಲ್ಲಿ ಸ್ವಾತಂತ್ರ್ಯೋತ್ತರ ಭಾರತದ ರಾಜಕೀಯ ಮತ್ತು ಸಾಮಾಜಿಕ ಏಳುಬೀಳುಗಳ ಕಡೆಗೆ ಕಣ್ಣು ಹೊರಳಿಸಲಾಗಿದೆ. ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ದೀರ್ಘಾಯುತ ವಿಳಂಬಿತ ಮರಣ ಎಂಬ ಲೇಖನದಲ್ಲಿ, ಕಾಂಗ್ರೆಸ್ ಪಕ್ಷದ ಏಳು ಬೀಳುಗಳನ್ನು ಭಾರತದ ಏಳು ಬೀಳುಗಳ ಜೊತೆಗೆ ಇಟ್ಟು ಚರ್ಚಿಸ ಲಾಗಿದೆ. ಅಭಿವ್ಯಕ್ತಿ ಸ್ವಾತಂತ್ಯಕ್ಕೆ ಇರುವ ಎಂಟು ಬೆದರಿಕೆಗಳು, ಚೈನಾ ಮುಖೇನ ಚಿಂತನೆ, ಭಾರತ ಮತ್ತು ಶ್ರೀಲಂಕಾಗಳಲ್ಲಿ ಪ್ರಜಾಪ್ರಭುತ್ವ ಮತ್ತು ಹಿಂಸಾಚಾರ ಮೊದಲಾದ ವಿಷಯಗಳನ್ನು ಇದು ಒಳಗೊಂಡಿದೆ. ಎರಡನೆ ಅಧ್ಯಾಯವನ್ನು ತತ್ವ ಸಿದ್ದಾಂತಗಳು ಮತ್ತು ಧೀಮಂತರು ಎಂದು ವಿಂಗಡಿಸಲಾಗಿದೆ. ಭಾರತದ ಮೇಲೂ ವಿಶ್ವದ ಮೇಲೂ ಪರಿಣಾಮ ಬೀರಿರುವ ಮಹಾನ್ ಚಿಂತಕರನ್ನು ಆಯ್ಕೆ ಮಾಡಿಕೊಂಡು, ಅವರ ಚಿಂತನೆಗಳನ್ನು ಮುಂದಿಟ್ಟು ವರ್ತಮಾನವನ್ನು ಇಲ್ಲಿ ವಿಶ್ಲೇಷಿಸಲಾಗಿದೆ.
©2024 Book Brahma Private Limited.