ಲೇಖಕಿ ಆರುಂಧತಿ ರಾಯ್ ಅವರ ಕೃತಿಯನ್ನು ಸುಕನ್ಯಾ ಕನಾರಳ್ಳಿ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ-‘ಮಿಡತೆಗಳ ಬರವಿಗೆ ಕಿವಿಗೊಡುತ್ತಾ’. ಪ್ರಜಾಪ್ರಭುತ್ವ ತೊಂದರೆಯಲ್ಲಿದೆ. ಸ್ವಾತಂತ್ಯ್ರ ಸೌಹಾರ್ದತೆ ಕ್ಷೀಣಿಸುತ್ತಿರುವ ಪ್ರಜಾಪ್ರಭುತ್ವದ ಬೆಳಕು, ಪ್ರಜಾಪ್ರಭುತ್ವ: ಮನೆಯೊಳಗಿದ್ದಾಗ ಅವಳು ಯಾರು?, ಎಷ್ಟು ಆಳಕ್ಕೆ ಒರೆಯಬಹುದು, ಅವನ ಬದುಕು ನಿರ್ನಾಮವಾಗಬೇಕು: ಭಾರತೀಯ ಪಾರ್ಲಿಮೆಂಟಿನ ಮೇಲೆ ದಾಳಿ ಎಂಬ ಅತಿ ವಿಚಿತ್ರ ಕತೆ, ಮರಿ ಬುಶ್, ಮನೆಗೆ ಮರಳು, ಅರಮನೆಯಲ್ಲಿ ಗುಲ್ಲೋ ಗುಲ್ಲು, ಮಿಡತೆಗಳ ಬರವಿಗೆ ಕಿವಿಗೊಡುತ್ತಾ: ಜನಾಂಗೀಯ ಹತ್ಯೆ, ನಿರಾಕರಣೆ ಮತ್ತು ಸಂಭ್ರಮದ ಆಚರಣೆ, ಆಜಾದಿ, ಒಂಭತ್ತು ಹನ್ನೊಂದಲ್ಲ (ಮತ್ತು ನವೆಂಬರ್ ಸೆಪ್ಟೆಂಬರ್ ಅಲ್ಲ!) ಮುಂತಾದ ಲೇಖನಗಳ ಸಂಕಲನ ಇದಾಗಿದೆ.
ಕೊಡಗಿನಲ್ಲಿ ಜನಿಸಿದ ಸುಕನ್ಯಾ ಅವರು ವಿಜ್ಞಾನದಲ್ಲಿ ಪದವಿ, ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಎಂ.ಫಿಲ್ ಪಡೆದಿದ್ದಾರೆ. ಅನುವಾದ, ಮಹಿಳಾ ಸಾಹಿತ್ಯ, ಸಂಶೋಧನೆಯಲ್ಲಿ ಆಸಕ್ತಿ. ’ಅಲ್ಲಿಂದ ಇಲ್ಲಿಗೇ ಅವಳ ಕಥೆಗಳು’, ಅರುಂಧತಿ ರಾಯ್ ಅವರ ’ಡಿಸೆಂಬರ್ 13’, ಮಿಡತೆಗಳ ಬರವಿಗೆ ಕಿವಿಗೊಡುತ್ತಾ’ ಜೊತೆಗೆ ಮಿಲನ್ ಕುಂದೇರಾನ ಕಾದಂಬರಿ ’ಹೊರಲಾರದ ಗಾಳಿ ಭಾರ’ ಕನಾರಳ್ಳಿ ಅವರು ಅನುವಾದಿಸಿದ ಕೃತಿಗಳು. ವೈದೇಹಿ ಅವರ ಆಯ್ದ ಕತೆಗಳ ಇಂಗ್ಲಿಷ್ ಅನುವಾದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಿಸಿದೆ. ಕನಾರಳ್ಳಿಯವರ ಹಲವು ಕಥೆ, ಅನುವಾದ, ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸದ್ಯ ನ್ಯೂಜಿಲೆಂಡ್ ನಲ್ಲಿ ಇಂಗ್ಲಿಷ್ ಅಧ್ಯಾಪಿಕೆಯಾಗಿದ್ದಾರೆ. ...
READ MORE