ಪುಣೆಯ I.U.C.A.A. ಮಕ್ಕಳ ವಿಜ್ಞಾನ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವೀಧರರ ಅರವಿಂದ ಗುಪ್ತ ಅವರು ಇಂಗ್ಲಿಷ್ ನಲ್ಲಿ ಬರೆದ ಕೃತಿಯನ್ನು ಲೇಖಕ ವಿ.ಎಸ್.ಎಸ್. ಶಾಸ್ತ್ರೀ ಅವರು ತ್ಯಾಜ್ಯವಸ್ತುಗಳಿಂದ ವಿಜ್ಞಾನ ಆಟಿಕೆಗಳು’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ತ್ಯಾಜ್ಯವಸ್ತುಗಳನ್ನು ಕಸ ಎಂದು ಹೊರಗೆ ಚೆಲ್ಲದೇ ಅವುಗಳಿಂದ ಪ್ರಯೋಗಾತ್ಮಕ ವಸ್ತುಗಳಾಗಿ ಪರಿವರ್ತಿಸುವ ಸೃಜನಶೀಲತೆಯನ್ನು ಮಕ್ಕಳಿಗೆ ಸುಲಭವಾಗಿ ತಿಳಿಸುವ ಕಳಕಳಿ ಇಲ್ಲಿದೆ. ವಿಜ್ಞಾನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ತ್ಯಾಜ್ಯವಸ್ತುಗಳಿಂದ ಆಟಿಕೆಗಳನ್ನುಉಪಕರಣ ಇಲ್ಲವೇ ಸಲಕರಣೆಗಳನ್ನು ತಯಾರಿಸಿ ವಿಜ್ಞಾನದ ಪ್ರಯೋಗಗಳನ್ನು ಮಾಡಬಹುದು.
ಒರಿಗಾಮಿ ಗಣಿತದ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ ಕೆಲವೇ ಕೆಲವರಲ್ಲಿ ವಿ.ಎಸ್.ಎಸ್. ಶಾಸ್ತ್ರಿ ಒಬ್ಬರು. ನವಕರ್ನಾಟಕದ ಗಣಿತ ಸಂವತ್ಸರ ಮಾಲೆಯ ಸಂಪಾದಕರ ಪೈಕಿ ಇವರೂ ಒಬ್ಬರು. ಗಣಿತ ಮತ್ತು ವಿಜ್ಞಾನ ಕುರಿತು ಹಲವು ಕೃತಿಗಳನ್ನು ರಚಿಸಿದ್ದಾರೆ. ಅರವಿಂದ ಗುಪ್ತ ಅವರ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಗಣಿತ ಚಟುವಟಿಕೆಗಳು, ಆಹಾ ಎಷ್ಟೊಂದು ಚಟುವಟಿಕೆಗಳು, ಸೌರಶಕ್ತಿಯ ಕತೆ, ತ್ಯಾಜ್ಯವಸ್ತುಗಳಿಂದ ವಿಜ್ಞಾನ-ಆಟಿಕೆಗಳು ಮುಂತಾದವು ಪ್ರಮುಖ ಕೃತಿಗಳು. ಇವರಿಗೆ ವಿಜ್ಞಾನ ಸಂವಹನಕಾರ ಪ್ರಶಸ್ತಿಯು ಲಭಿಸಿದೆ. ...
READ MORE