‘ಉರಿವ ಬನದ ಕೋಗಿಲೆಗಳು’ ಮಹಿಳೆ ಯುದ್ಧ ಮತ್ತು ಶಾಂತಿ ಕಥನಗಳ ಕನ್ನಡಾನುವಾದ. ಜಗತ್ತಿನ ಮಹತ್ವದ ಮಹಿಳಾವಾದಿಗಳ ಲೇಖನಗಳು ಮತ್ತು ಬದುಕಿನ ಕುರಿತಾದ ಬರಹಗಳನ್ನು ಹೇಮಾ ಎಸ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕಕಿನಟೈಯ, ಮೆಮೊರಿ ಬಾಂದ, ಲೌರ ಬೋಶ್ನಿಕ್, ಆಫ್ಘಾನಿಸ್ತಾನದ ಜಹಾರ ಮತ್ತು ಅರೀಫ, ಸ್ವೆಟ್ಲಾನ ಅಲೆಕ್ಸಿವಿಚ್, ಸಾರಾ ಕಮೆನ್ಸ್ಕಿ ಮತ್ತು ಎನ್ಸುನ್ ಕಿಮ್ ಹೀಗೆ ಹಲವು ಮಾನವತಾವಾದಿಗಳ ಅನುಭವ ಕಥನಗಳನ್ನು ಕನ್ನಡದಲ್ಲಿ ಕಟ್ಟಿಕೊಟ್ಟಿದ್ದಾರೆ.
ಹೇಮಾ ಎಸ್, ಕನ್ನಡದಲ್ಲಿ ಎಂ.ಎ ಹಾಗೂ ಪಿಎಚ್.ಡಿ ಪದವೀಧರರು. ಉಪನ್ಯಾಸಕಿಯಾಗಿ ಹಾಗೂ ಆಕಾಶವಾಣಿಯಲ್ಲಿ ಕೆಲವು ಕಾಲ ಉದ್ಘೋಷಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಇಂಗ್ಲಿಷ್ ಹಾಗೂ ಹಿಂದಿಯಿಂದ ಲೇಖನ, ಕಥೆ ಹಾಗೂ ಕವನಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವು ಮಯೂರ, ಪ್ರಜಾವಾಣಿ, ಅವಧಿ, ಕಸ್ತೂರಿ, ಕೆಂಡಸಂಪಿಗೆ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕೆಂಡಸಂಪಿಗೆಯಲ್ಲಿ ಅಕಿರ ಕುರಸೊವನ ಆತ್ಮಕತೆಯ ಅನುವಾದದ ಸರಣಿ ಪ್ರಕಟವಾಗುತ್ತಿದೆ. ಅಬ್ಬಾಸ್ ಕಿರಸ್ತೋಮಿಯ ಪದ್ಯಗಳ ಅನುವಾದ ʼಹೆಸರಿಲ್ಲದ ಹೂʼ ಸಂಚಯದಿಂದ ಪ್ರಕಟಗೊಂಡಿದೆ. ಜೊತೆಗೆ ಅನುವಾದಿತ ಕೃತಿ ‘ಉರಿವ ಬನದ ಕೋಗಿಲೆಗಳು’ಕೃತಿ ಸೃಷ್ಟಿ ಪ್ರಕಾಶನದಿಂದ ಪ್ರಕಟವಾಗಿದೆ. ...
READ MORE