`ಭಾರತ ಜಾಗೃತಿ' ವೈಚಾರಿಕ ಬರಹಗಳ ಸಂಕಲನವನ್ನು ಎಸ್. ಆರ್. ರಾಮಸ್ವಾಮಿ ಅವರು ಸಂಪಾದಿಸಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಧರ್ಮಪಾಲ್ ಎಂಬುವರು ಈ ಕೃತಿಯನ್ನು ಹಿಂದಿಯಲ್ಲಿ ರಚಿಸಿದ್ದಾರೆ. ಖ್ಯಾತ ಗಾಂಧೀವಾದಿ ಮತ್ತು ಇತಿಹಾಸ ಸಂಶೋಧಕ ಧರ್ಮಪಾಲ್ ನೀಡಿದ ಮೂರು ಉಪನ್ಯಾಸಗಳ ಸಂಗ್ರಹ ರೂಪದ ಹೊತ್ತಿಗೆ. ಸ್ವದೇಶಿ ಜಾಗೃತಿಯೇ ಉಪನ್ಯಾಸದ ವಸ್ತು. ಪರಾಧೀನತೆಯ ಪ್ರತಿಫಲನ ಕ್ಷೀಣಿಸಿ ಭಾರತದ ಸ್ವಗೌರವ ಸಾಧನೆಗೆ ಇಲ್ಲಿನ ಚಿಂತನೆಗಳು ಪೂರಕವಾಗಿವೆ. ಉಪನ್ಯಾಸಗಳನ್ನು ಬರಹಕ್ಕೆ ತಂದ ಧರ್ಮಪಾಲ್ ಸಮಾಜಕ್ಕೆ ಬೇಕಾದ ಅಂಶಗಳನ್ನು ಈ ಕೃತಿಯಲ್ಲಿ ನೀಡಿದ್ದಾರೆ.
ನಾಡೋಜ ಎಸ್.ಆರ್.ರಾಮಸ್ವಾಮಿ ಅವರು ಪತ್ರಕರ್ತರಾಗಿ, ಲೇಖಕರಾಗಿ, ಚಿಂತಕರಾಗಿ, ವಿಮರ್ಶಕರಾಗಿ, ಸಾಮಾಜಿಕ ಕಾರ್ಯಕರ್ತರಾಗಿ ನಾಡಿನಲ್ಲಿ ಸುಪರಿಚಿತರು. ಮೂಲತಃ ಬೆಂಗಳೂರಿನವರೇ ಆದ ರಾಮಸ್ವಾಮಿ ಅವರು ಕನ್ನಡ, ತೆಲುಗು, ಸಂಸ್ಕೃತ, ಹಿಂದಿ, ಇಂಗ್ಲಿಷ್, ಜರ್ಮನ್, ಫ್ರೆಂಚ್ ಭಾಷೆಗಳಲ್ಲಿ ಪ್ರಾವೀಣ್ಯತೆ ಹೊಂದಿದವರು. 1950ರ ದಶಕದಲ್ಲಿ ಪತ್ರಿಕೋದ್ಯಮ ಪ್ರವೇಶಿಸಿದ ಇವರು, 1972 ರಿಂದ 79ರ ವರೆಗೆ ಸುಧಾ ವಾರಪತ್ರಿಕೆಯ ಮುಖ್ಯ ಉಪಸಂಪಾದಕರಾಗಿ ಸೇವೆ ಸಲ್ಲಿಸಿದರು. 1980ರಲ್ಲಿ ರಾಷ್ಟೋತ್ಥಾನ ಸಾಹಿತ್ಯ ಮತ್ತು ಉತ್ಥಾನ ಮಾಸಪತ್ರಿಕೆಯ ಗೌರವ ಪ್ರಧಾನ ಸಂಪಾದಕರಾದ ಇವರು ಇಂದಿಗೂ ಆ ಹುದ್ದೆಯಲ್ಲಿ ಸೇವಾನಿರತರಾಗಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸುಮಾರು 55 ಕ್ಕೂ ...
READ MORE