ಇಟಾಲಿಯನ್ ಮಹಾಕವಿ ಡಾಂಟೆ ಅಲಿಘಿಯರ್ ಅವರ ಡಿವೈನ್ ಕಾಮಿಡಿ ಭಾಗ-2 ಅನ್ನು ಪ್ರೊ. ಕೆ.ಎಂ. ಸೀತಾರಾಮಯ್ಯ ಅವರು ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಡಿವೈನ್ ಕಾಮಿಡಿಯ ಮೊದಲನೆಯ ಭಾಗ- ಇನ್‌ಫರ್ನೊ (ನರಕಲೋಕ)ವನ್ನು ಇವರೇ ಅನುವಾದಿಸಿ ಸಾಹಿತ್ಯಲೋಕವನ್ನು ಶ್ರೀಮಂತಗೊಳಿಸಿದ್ದರು. ಈಗ ಎರಡನೆಯ ಭಾಗ “ಪರ್ಗೆಟೋರಿಯೋ”(ಪ್ರಾಯಶ್ಚಿತ್ತ ಲೋಕ) ಬೆಳಕು ಕಾಣುತ್ತಿದೆ. ಮಹಾಕಾವ್ಯಗಳನ್ನು ಭಾಷಾಂತರಿಸುವುದು ಇವರಿಗೆ ಒಗ್ಗಿ ಹೋಗಿದೆ. ಇವುಗಳ ಜೀವಾಳವನ್ನು ಓದುಗರಿಗೆ ನೀಡುವುದೇ ಇವರ ವೈಶಿಷ್ಟ್ಯ. purgatory ಎನ್ನುವುದನ್ನು “A place in which souls after death are purified and suffer punishment for mortal sins not atoned for” ಎಂಬುದಾಗಿ ವಿವರಣೆಯಿದೆ. ಆದ್ದರಿಂದ “ಪ್ರಾಯಶ್ಚಿತ್ತಲೋಕ” ಎನ್ನುವುದು ಅತ್ಯಂತ ಸಮರ್ಪಕವಾದ ಅನುವಾದ. ಮೂವತ್ತು ಮೂರು ಸ್ವರ್ಗಗಳಿರುವ ಪ್ರಾಯಶ್ಚಿತ್ತ ಪ್ರಕರಣದಲ್ಲಿ ಸೀತಾರಾಮಯ್ಯನವರು ಶಿಸ್ತಾಗಿ ಮೊದಲು “ಕಥೆ” ಆಮೇಲೆ “ಟಿಪ್ಪಣಿಗಳು” ಹೀಗೆ ಅರ್ಥಪೂರ್ಣವಾಗಿ ವಿಭಾಗಿಸಿಕೊಂಡಿದ್ದಾರೆ. ಇದು ಅತ್ಯಂತ ಸಮರ್ಪಕವಾದ ರೀತಿ. ಕಥೆ ಸೊಗಸಾಗಿ ಸುಲಭವಾಗಿ ಓದಿಸಿಕೊಳ್ಳುತ್ತದೆ ಎಂಬ ಅಭಿಪ್ರಾಯ ವಿದ್ವತ್ ಲೋಕದಲ್ಲಿದೆ.
ಕೆ.ಎಂ.ಸೀತಾರಾಮಯ್ಯನವರು 1929 ಅಕ್ಟೋಬರ್ 10ರಂದು ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಕೆಂಪಸಾಗರದಲ್ಲಿ ಜನಿಸಿದರು. ತಾಯಿ ವೆಂಕಟಲಕ್ಷ್ಮಮ್ಮ, ತಂದೆ ಕೆ.ಮೈಲಾರಯ್ಯ. ಅರಸೀಕೆರೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಸೀತಾರಾಮಯ್ಯನವರು ಹಾಸನದಲ್ಲಿ ಇಂಟರ್ ಮೀಡಿಯೇಟ್ ಶಿಕ್ಷಣ ಹಾಗೂ ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎ ಪದವಿ ಪಡೆದರು. ಮೈಸೂರು ವಿಶ್ವವಿದ್ಯಾಲದಿಂದ ಸ್ನಾತಕೋತ್ತರ ಪದವಿ ಪಡೆದರು. ಅಧ್ಯಾಪಕರಾಗಿ ವೃತ್ತಿ ಆರಂಭಿಸಿ ರಾಜ್ಯದ ನಾನಾ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದರು. ಅವರು 2023 ನ. 20 ರಂದು ನಿಧನರಾದರು. ಸೀತಾರಾಮಯ್ಯನವರ ಪ್ರಮುಖ ಕೃತಿಗಳೆಂದರೆ ಸಪ್ತಸ್ವರ, ಮಾನಸಪೂಜೆ, ರಾಜರಹಸ್ಯ, ಸಂನ್ಯಾಸಿ, ಇಲಿಯಡ್ ಮತ್ತು ಒಡಿಸ್ಸಿಗಳನ್ನು ಕನ್ನಡಕ್ಕೆ ...
READ MORE