ಹೈದರಾಬಾದ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಯಾಗಿದ್ದ ರೋಹಿತ್ ಚಕ್ರವರ್ತಿ ವೇಮುಲಾ ಆತ್ಮಹತ್ಯೆ ದೇಶದಲ್ಲಿ ಸೃಷ್ಟಿಸಿದ ತಲ್ಲಣ ಅಷ್ಟಿಷ್ಟಲ್ಲ. ದಮನಿತರ ಹಕ್ಕುಗಳ ಪರವಾಗಿ ಘೋಷಣೆಗಳು ಮೊಳಗಿದವು. ಪುಟ್ಟದೊಂದು ಆಂದೋಲನಕ್ಕೂ ನಾಂದಿಹಾಡಿತು ಘಟನೆ. ಪರಿಣಾಮ ಕನ್ಹಯ ಕುಮಾರ್, ಜಿಗ್ನೇಶ್ ಮೇವಾನಿ ಅವರಂತಹ ಯುವ ನಾಯಕರು ಉದಯಿಸಿದರು.
ಯುವ ವಿದ್ಯಾರ್ಥಿ ವೇಮುಲ ಸಾವಿನ ಕುರಿತಂತೆ ದೇಶದ ಅನೇಕ ಪ್ರಜ್ಞಾವಂತರು ಲೇಖನಗಳನ್ನು ಬರೆದರು. ಕವಿತೆಗಳೂ ಹುಟ್ಟಿಕೊಂಡವು. ತೆಲುಗಿನಲ್ಲಿ ’ಕತ್ತಲ ನಕ್ಷತ್ರ’ ಎಂಬ ಕೃತಿ ವೇಮುಲ ನೆನಪಿನಲ್ಲಿ ಹೊರಬಂತು. ಕ್ರಾಂತಿಕಾರಿ ಕವಿ ವಿರಸಂ ಇದನ್ನು ಸಂಪಾದಿಸಿದ್ದರು.
ಕನ್ನಡಕ್ಕೆ ಈ ಕೃತಿಯನ್ನು ತಂದವರು ಬಿ. ಸುಜ್ಞಾನಮೂರ್ತಿ. 44 ವೈವಿಧ್ಯಮಯ ಬರಹಗಳು ಇಲ್ಲಿವೆ. ಅಲ್ಲದೆ ಮನಮಿಡಿಯುವ ಕವಿತೆಗಳೂ ಇವೆ. ಇಡೀ ಕೃತಿ ಬೇರೆ ಬೇರೆ ನೆಲೆಗಳಲ್ಲಿ ರೋಹಿತ್ ಸಾವನ್ನು ನೋಡುತ್ತಾ, ಮತ್ತೊಂದು ದಲಿತ ಆಂದೋಲನ ಈ ನೆಲೆದಿಂದ ಚಿಮ್ಮಬೇಕಾದ ಅಗತ್ಯವನ್ನು ಎತ್ತಿ ಹಿಡಿಯುತ್ತದೆ. ಹೊಸದೊಂದು ವಿದ್ಯಾರ್ಥಿ ಚಳವಳಿಯೂ ಉದಯಿಸಬೇಕೆಂಬ ಆಶಯ ಕೃತಿಯಲ್ಲಿದೆ.
©2024 Book Brahma Private Limited.