ರಾಧಾಕೃಷ್ಣನ್ ಪಿಳ್ಳೆ ಅವರು ಇಂಗ್ಲಿಷಿನಲ್ಲಿ ಬರೆದ ಕೃತಿಯನ್ನು ಅದೇ ಜೈಕೋ ಪಬ್ಲಿಷಿಂಗ್ ಹೌಸ್ ಸಂಸ್ಥೆಯವರು ವಿವಿಧ ಲೇಖಕ-ಅನುವಾದಕರ ನೆರವಿನೊಂದಿಗೆ ಕನ್ನಡದಲ್ಲೂ ಪ್ರಕಟಿಸಿದ ಕೃತಿ-ನಿಮ್ಮೊಳಗಿನ ಚಾಣಕ್ಯ. ಕಾರ್ಪೋರೇಟ್ ವಲಯ ಹಾಗೂ ನಾಯಕತ್ವ ಕುರಿತಂತೆ ಚಾಣಕ್ಯನು ಹೇಳಿರುವ 7 ರಹಸ್ಯಮಯ ಸೂತ್ರಗಳನ್ನು ಒಳಗೊಂಡ ಈ ಕೃತಿಯು ರಾಷ್ಟ್ರಮಟ್ಟದಲ್ಲಿ ಅತಿ ಹೆಚ್ಚು ಪ್ರಸಾರ ಪಡೆದ ಕೃತಿ ಇದು. ಕನ್ನಡ ಓದುಗರ ಅನುಕೂಲದ ದೃಷ್ಟಿಯಿಂದ ‘ನಿಮ್ಮೊಳಗಿನ ಚಾಣಕ್ಯ’ ಪ್ರಕಟಗೊಂಡಿದ್ದು, ಚಾಣಕ್ಯನಲ್ಲಿರುವ ಚಾಣಾಕ್ಷ ವ್ಯಕ್ತಿಯೊಬ್ಬರು ಪ್ರತಿಯೊಬ್ಬರಲ್ಲೂ ಇರುತ್ತಾರೆ. ಆತನನ್ನು ಪತ್ತೆ ಮಾಡಿ ಕಂಡುಕೊಳ್ಳುವ ಹೊಣೆ ನಮ್ಮದು ಎಂಬ ರೀತಿಯಲ್ಲಿ ಪ್ರೇರಣಾತ್ಮಕ ಕೃತಿಯಾಗಿ ಮೂಡಿಬಂದಿದೆ.