ʼಮಹಾತ್ಮ ಗಾಂಧಿ - ಅಂತಿಮ ಹಂತʼ ಕೃತಿಯು ಲೇಖಕ ಪ್ಯಾರಾಲೆಲ್ ಅವರ ಆಂಗ್ಲ ಭಾಷೆಯಲ್ಲಿಯ ಲೇಖನಗಳ ಸಂಕಲನ. ಲೇಖಕ ಕೆ.ವಿ. ಶಂಕರಗೌಡ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಗ್ರಂಥವು ಕನ್ನಡ ಬಿಟ್ಟರೆ ಬೇರೆ ಯಾವ ಭಾಷೆಗೂ ಅನುವಾದವಾಗಿಲ್ಲ ಎಂಬುದು ಗಮನಾರ್ಹ. ಅನುವಾದದಲ್ಲಿ ಮೂಲಕೃತಿಯ ವಾಚ್ಯಾರ್ಥ, ಭಾವಾರ್ಥಗಳಿಗೆ ಚ್ಯುತಿ ಬಾರದಂತೆ ಅಪಾರ ಶ್ರದ್ಧೆ ವಹಿಸಿದ್ದೇನೆ. ಆದರೂ ದೋಷ ತಲೆದೋರಿದ್ದಲ್ಲಿ ಆ ಅಪಚಾರಕ್ಕೆ ತಾವೇ ಹೊಣೆ ಎಂದು ಲೇಖಕ ಶಂಕರಗೌಡರು ಸ್ಪಷ್ಟಪಡಿಸಿದ್ದಾರೆ.
ಲೇಖಕ ಕೆ ವಿ ಶಂಕರ ಗೌಡ ಅವರು ಮಂಡ್ಯ ಜಿಲ್ಲೆಯವರು. ತಂದೆ ವೀರಗೌಡ, ತಾಯಿ ವೀರಮ್ಮ. ಮಂಡ್ಯ ಜಿಲ್ಲೆಯ ಆಧುನಿಕ ಶಿಲ್ಪಿ ಹಾಗೂ ನಿತ್ಯ ಸಚಿವ ಎಂದೇ ಪ್ರಸಿದ್ದರು. ದೇಶದ ಸ್ವಾತಂತ್ರ್ಯ ನಂತರದ ಕರ್ನಾಟಕದಲ್ಲಿ ಸಾಹಿತ್ಯ, ಸಂಗೀತ, ನಾಟಕ ಮತ್ತು ಸಾಂಸ್ಕತಿಕ ವಲಯಗಳಲ್ಲಿ ಗುರುತಿಸಿಕೊಂಡವರು. 1968 ರಲ್ಲಿ , ಮುಖ್ಯಮಂತ್ರಿ ವೀರೇಂದ್ರ ಪಾಟೀಲರ ಸಚಿವ ಸಂಪುಟದಲ್ಲಿ ಇವರು ಶಿಕ್ಷಣ ಸಚಿವರಾಗಿದ್ದರು. 1990ನೇ ಮಾರ್ಚ್ 4ರಂದು ನಿಧನರಾದರು. ಕೃತಿಗಳು: ಪಾದುಕಾ ಕಿರಿಟಿ (ನಾಟಕ) ...
READ MORE