ತತ್ವದರ್ಶಿ ಜಿಡ್ಡು ಕೃಷ್ಣಮೂರ್ತಿ ಅವರು ಬದುಕು ಹಾಗೂ ಕಲಿಕೆ ಕುರಿತು ವ್ಯಕ್ತಪಡಿಸಿದ ವಿಚಾರಗಳ ಕೃತಿಯನ್ನು ಲೇಖಕ ಮಹಾಬಲೇಶ್ವರ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಭಾರತೀಯ ತತ್ವಶಾಸ್ತ್ರವನ್ನು ಅತ್ಯಂತ ಸರಳವಾಗಿ ತಿಳಿಸಿಕೊಡುವುದರ ಜೊತೆಗೆ ಸರಳ ಜೀವನ ನಡೆಸಿದ ಜಿಡ್ಡು ಕೃಷ್ಣಮೂರ್ತಿ ಅವರು ಭಾರತೀಯ ತತ್ವಶಾಸ್ತ್ರ ಹಾಗೂ ಬೌದ್ಧತತ್ವಗಳ ಸಾಮಿಪ್ಯವನ್ನು ಗುರುತಿಸಿ ಪ್ರಚಾರ ಕೈಗೊಂಡ ಅವರನ್ನು ‘ಬೋಧಿಸತ್ವ ಅಂತಃಕರಣದ ಮೈತ್ರೇಯ ಅವತಾರಿ - ವಿಶ್ವಗುರು’ ಎಂದೇ ಗುರುತಿಸಲಾಗುತ್ತಿತ್ತು. ಅವರ ಚಿಂತನೆಗಳಿಗೆ ಧಕ್ಕೆ ಬಾರದಂತೆ ಅನುವಾದಿಸಿ, ಜಿಡ್ಡು ಅವರ ವ್ಯಕ್ತಿತ್ವದ ಎತ್ತರವನ್ನುಲೇಖಕರು ಪರಿಚಯಿಸಿದ್ದಾರೆ.
©2024 Book Brahma Private Limited.