ದೇಶದ ಇತಿಹಾಸದಲ್ಲಿ ಹಿಂದೆಂದೂ ಕಂಡು ಕೇಳರಿಯದಂತಹ ವಂಚನೆ ಎಂದೇ ಉಪಶೀರ್ಷಿಕೆಯ ಮೂಲಕ ಓದುಗರ ಗಮನ ಸೆಳೆದ ಕೃತಿ-ನೋಟು ರದ್ದತಿ. ಪ್ರೊ. ಕಮಲ್ ಮಿತ್ರ ಚಿನಾಯ್., ಎಂ. ಸತ್ಯಾನಂದ ಪರಂಜಯ, ಗುಹಾ ಟಾಕೂರ್ತಾ, ಎನ್. ಚಿದಂಬರಂ ಅವರು ‘ಕೇಂದ್ರ ಸರ್ಕಾರ ನೋಟು ರದ್ದು ಮಾಡಿದ ವಿಷಯದ ಮೇಲಿನ ಅವರ ಇಂಗ್ಲಿಷ್ ಬರಹಗಳನ್ನು ಸಂಪಾದಿಸಿದವರು-ಶಮೀಮ್ ಫೈಜ್. ಈ ಸಂಪಾದಿತ ಕೃತಿಯನ್ನು ಲೇಖಕರಾದ ಎಸ್. ಸುರೇಂದ್ರ, ಎ.ಜ್ಯೋತಿ ಹಾಗೂ ಮ.ಶ್ರೀ. ಮರಳುಕೃಷ್ಣ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಪೂರ್ವಾಗ್ರಹ ಪೀಡಿತದ ಪರಿಣಾಮ ಕೇಂದ್ರ ಸರ್ಕಾರವು ನೋಟು ರದ್ದತಿಯಂತಹ ಅತಾರ್ಕಿಕ ನಿರ್ಣಯ ಕೈಗೊಂಡಿದ್ದು, ಜನಸಾಮಾನ್ಯರಿಗೆ ತೊಂದರೆಯನ್ನುಂಟು ಮಾಡಿತು. ಕೇಂದ್ರ ಸಕಾರದ ಈ ನಿರ್ಣಯವು ಅತಾರ್ಕಿಕ, ಪೂರ್ವಾಗ್ರಹಪೀಡಿತ, ಅವೈಜ್ಞಾನಿಕ ಎಂದು ಬರಹಗಳಲ್ಲಿ ಟೀಕಿಸಿದ್ದಾರೆ.
©2024 Book Brahma Private Limited.